ಮೈಸೂರು: ಬಹುನಿರೀಕ್ಷಿತ ಕ್ರಾಂತಿ ಸಿನಿಮಾ ಶೂಟಿಂಗ್ ನ ಕೊನೆಯ ಹಂತ ಈಗ ಭರದಿಂದ ಸಾಗುತ್ತಿದೆ.
ಬೆಂಗಳೂರು, ಹೈದರಾಬಾದ್ ನಲ್ಲಿ ಶೂಟಿಂಗ್ ನಡೆಸಿದ್ದ ಚಿತ್ರತಂಡ ಈಗ ಮೈಸೂರಿನಲ್ಲಿ ಚಿತ್ರೀಕರಣ ನಡೆಸುತ್ತಿದೆ. ಈಗಾಗಲೇ ಶೇ.80 ರಷ್ಟು ಚಿತ್ರೀಕರಣ ಮುಗಿದಿದೆ ಎನ್ನಲಾಗಿದೆ.
ಕಳೆದ ಒಂದು ವಾರದಿಂದ ಸತತವಾಗಿ ಶೂಟಿಂಗ್ ನಲ್ಲಿ ಭಾಗಿಯಾಗಿದ್ದ ಡಿ ಬಾಸ್ ಈಗ ಬ್ರೇಕ್ ತೆಗೆದುಕೊಂಡಿದ್ದು ಸ್ನೇಹಿತರ ಜೊತೆ ವಿಶ್ರಾಂತಿ ಮೂಡ್ ನಲ್ಲಿದ್ದಾರೆ.