ಚೆನ್ನೈ: ಟಾಲಿವುಡ್ ನಟ ಧನುಷ್ ಹೆತ್ತವರು ಎಂದು ಹೇಳಿಕೊಂಡು ವೃದ್ಧ ದಂಪತಿಯೊಬ್ಬರು ಕೋರ್ಟ್ ಮೆಟ್ಟಿಲೇರಿದ ಪ್ರಕರಣ ನಿಮಗೆ ಗೊತ್ತಿರಬಹುದು.
ಮಧುರೈ ಮೂಲದ ವೃದ್ಧ ದಂಪತಿ ಕತಿರೇಷನ್ ಮತ್ತು ಮೀನಾಕ್ಷಿ ಎಂಬವರು ಧನುಷ್ ನಮ್ಮ ಮಗ ಎಂದು ಕೋರ್ಟ್ ಗೆ ದೂರು ಸಲ್ಲಿಸಿದ್ದರು. ಇದು ಧನುಷ್ ರನ್ನು ಮುಜುಗರಕ್ಕೀಡು ಮಾಡಿದೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಇದೀಗ ಧನುಷ್ ವೃದ್ಧ ದಂಪತಿಗೆ ತಮ್ಮ ಲಾಯರ್ ಮುಖಾಂತರ ಲೀಗಲ್ ನೋಟಿಸ್ ನೀಡಿದ್ದಾರೆ. ಇಂತಹ ಸುಳ್ಳು ವಾದ ಮಾಡಿ ಪ್ರತಿಷ್ಠೆಗೆ ಕುಂದು ತಂದರೆ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ನೋಟಿಸ್ ನಲ್ಲಿ ಎಚ್ಚರಿಕೆ ನೀಡಲಾಗಿದೆ.