Select Your Language

Notifications

webdunia
webdunia
webdunia
webdunia

ಒಂದು ರಾತ್ರಿಗೆ ಎಷ್ಟು ರೇಟು? ಕನ್ನಡದ ಖ್ಯಾತ ಗಾಯಕಿಗೆ ನೆಟ್ಟಿಗನ ಅಶ್ಲೀಲ ಮೆಸೇಜ್

ಸಂಗೀತಾ ರಾಜೀವ್
ಬೆಂಗಳೂರು , ಮಂಗಳವಾರ, 3 ನವೆಂಬರ್ 2020 (11:43 IST)
ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಸೆಲೆಬ್ರಿಟಿಗಳಿಗೆ ಕೆಲವು ದುರುಳರು ಅಶ್ಲೀಲ ಸಂದೇಶ ಕಳುಹಿಸುವುದು ಇದೇ ಮೊದಲೇನಲ್ಲ. ಇದೀಗ ಗಾಯಕಿ ಸಂಗೀತಾ ರಾಜೀವ್ ಇಂತಹದ್ದೇ ಪ್ರಸಂಗ ಎದುರಿಸಿದ್ದಾರೆ.
Photo: Facebook


ವ್ಯಕ್ತಿಯೊಬ್ಬ ತಮ್ಮ ಇನ್ ಸ್ಟಾಗ್ರಾಂ ಖಾತೆಗೆ ‘ಒಂದು ರಾತ್ರಿಗೆ ಎಷ್ಟು ರೇಟು?’ ಎಂಬುದಾಗಿ ಅಶ್ಲೀಲ ಸಂದೇಶ ಕಳುಹಿಸಿರುವುದನ್ನು ಸ್ಕ್ರೀನ್ ಶಾಟ್ ಸಮೇತ ಕಳುಹಿಸಿರುವ ಸಂಗೀತಾ ‘ನಿನ್ನ ತಾಯಿಗೋ ತಂಗಿಗೋ ಇದೇ ಪ್ರಶ್ನೆ ಕೇಳುತ್ತೀಯಾ? ಇಲ್ಲಿಯವರೆಗೂ ಇಂತಹ ಅನೇಕ ಸಂದೇಶಗಳನ್ನು ಕಡೆಗಣಿಸಿದ್ದೇನೆ. ಆದರೆ ಈ ಮನುಷ್ಯ ಸಂಸ್ಕೃತಿಯನ್ನೇ ಮರೆತು ಮಾತನಾಡಿದ್ದಾನೆ. ಈ ಬಾರಿ ಈತನ ಹೆಸರು ಬ್ಲರ್ ಮಾಡಿದ್ದೇನೆ. ಆದರೆ ಮುಂದೆ ಇಂತಹ ಕೆಲಸ ಮಾಡಿದರೆ ಹೆಸರು ಸಮೇತ ಪ್ರಕಟಿಸಿ ಮರ್ಯಾದೆ ತೆಗೆಯಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದ್ದಾರೆ. ಜೀ ಕನ್ನಡದ ಸರಿಗಮಪ ಕಾರ್ಯಕ್ರಮದ ತೀರ್ಪುಗಾರರ ಪ್ಯಾನೆಲ್ ನಲ್ಲಿ ಒಬ್ಬರಾಗಿರುವ ಸಂಗೀತಾ ಇತ್ತೀಚೆಗಷ್ಟೇ ಶೈನ್ ಶೆಟ್ಟಿಯೊಂದಿಗೆ ಆಲ್ಬಮ್ ಹಾಡೊಂದರಲ್ಲಿ ಕಾಣಿಸಿಕೊಂಡಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಹಸೆಮಣೆ ಏರಿದ ತೆಲುಗು ನಟ ರಾಜಾ ಚೆಂಬೋಲು