Webdunia - Bharat's app for daily news and videos

Install App

ಪ್ರತಿಭಾನ್ವಿತ ತಂಡದ 'ಶುಭಮಂಗಳ' ಟೀಸರ್ ರಿಲೀಸ್!

Webdunia
ಶುಕ್ರವಾರ, 13 ಮೇ 2022 (15:14 IST)
ಚಿತ್ರಬ್ರಹ್ಮ ಪುಟ್ಟಣ್ಣ ಕಣಗಲ್ ನಿರ್ದೇಶನದ ಶುಭಮಂಗಳ ಸಿನಿಮಾ ಯಾರಿಗೆ ತಾನೆ ಗೊತ್ತಿಲ್ಲ. ಈ ಎವರ್ ಗ್ರೀನ್ ಸಿನಿಮಾವನ್ನು ಯಾರಾದ್ರೂ ಮರೆಯುದುಂಟೇ. .? ಇದೇ ಟೈಟಲ್ ಇಟ್ಟುಕೊಂಡು ಸ್ಯಾಂಡಲ್ ವುಡ್ ನಲ್ಲಿ ಹೊಸ ಸಿನಿಮಾ ಸೆಟ್ಟೇರಿರೋದು ಹಳೆ ವಿಷ್ಯ. ಇದೀಗ ಶುಭಮಂಗಳ ಸಿನಿಮಾ ಅಂಗಳದಿಂದ ಸಖತ್ ಮಜವಾಗಿರುವ ಟೀಸರ್ ತುಣುಕು ಬಿಡುಗಡೆಯಾಗಿದ್ದು, ಸಿನಿಮಾ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿದೆ.
ಈ ಹಿಂದೆ ಸಿಲ್ಕ್ ಬೋರ್ಡ್, ಮಹಾ ಸಂಪರ್ಕ ಸೇರಿದಂತೆ 20ಕ್ಕೂ ಹೆಚ್ಚು ಕಿರುಚಿತ್ರಗಳ ನಿರ್ಮಾತೃ ಸಂತೋಷ್ ಗೋಪಾಲ್ ನಿರ್ದೇಶನದಲ್ಲಿ ತಯಾರಾಗಿರುವ ಶುಭಮಂಗಳ ಸಿನಿಮಾದಲ್ಲಿ ಒಂದು ಮದುವೆ ಮನೆಯಲ್ಲಿ ನಡೆಯುವ ಕಾಮಿಡಿ, ಲವ್, ಸೆಂಟಿಮೆಂಟ್ ಎಳೆಯನ್ನು ಇಟ್ಕೊಂಡು ಸಿನಿಮಾ ಮಾಡಿದ್ದಾರೆ. ಪ್ರತಿಯೊಬ್ಬರಿಗೂ ಕನೆಕ್ಟ್ ಆಗುವ ಸಿನಿಮಾ ಇದಾಗಿದ್ದು, ಸಿದ್ಧಾರ್ಥ್‌ ಮಾಧ್ಯಮಿಕ, ಮೇಘನಾ ಗಾಂವ್ಕರ್‌, ಹಿತಾ ಚಂದ್ರಶೇಖರ್‌, ರಾಕೇಶ್ ಮಯ್ಯ, ಅದಿತಿ ರಾಮ್, ದೀಪ್ತಿ ನಾಗೇಂದ್ರ, ಅರುಣ್ ಬಲಾಜಿ ಸೇರಿದಂತೆ ದೊಡ್ಡ ತಾರಾಬಳಗವೇ ಸಿನಿಮಾದಲ್ಲಿದೆ.
ಈಗಾಗಲೇ ಶೂಟಿಂಗ್ ಕಂಪ್ಲೀಟ್ ಮಾಡಿ ರಿಲೀಸ್ ಹೊಸ್ತಿಲಿನಲ್ಲಿರುವ ಶುಭಮಂಗಳ ಸಿನಿಮಾದಲ್ಲಿ ಐದು ವೆರೈಟಿ ಹಾಡುಗಳಿದ್ದು, ಜೂಡಾ ಸ್ಯಾಂಡಿ ಮ್ಯೂಸಿಕ್ ಇಂಪು, ರಾಕೇಶ್ ಬಿ ರಾಜ್ ಕ್ಯಾಮೆರಾ ತಂಪು ಸಿನಿಮಾಕ್ಕಿದೆ. ಶುಭಮಂಗಳ ಸಿನಿಮಾಗೆ ಆಕ್ಷನ್ ಕಟ್ ಹೇಳುವುದರ ಜೊತೆಗೆ ನಿರ್ದೇಶಕ ಸಂತೋಷ್ ಸಂಕಲನದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ತಮ್ಮದೇ ಅವ್ಯಕ್ತ ಬ್ಯಾನರ್ ನಡಿ ಸ್ನೇಹಿತರು ಹಾಗೂ ಕುಟುಂಬಸ್ಥರ ಜೊತೆಗೂಡಿ ಸಿನಿಮಾ ಕೂಡ ನಿರ್ಮಾಣ ಮಾಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಸು ಫ್ರಮ್ ಸೋ ಶೋ ಕಡಿಮೆಯಾಯ್ತು ಎಂದ ಪ್ರೇಕ್ಷಕರಿಗೆ ರಾಜ್ ಬಿ ಶೆಟ್ಟಿ ಹೇಳಿದ್ದೇನು

ಸ್ಟಾರ್ ಗಳಿಲ್ಲದಿದ್ದರೂ ಮೊದಲ ದಿನವೇ ಸು ಫ್ರಮ್ ಸೋ ಸಿನಿಮಾ ಭರ್ಜರಿ ಕಲೆಕ್ಷನ್

ಥೈಲ್ಯಾಂಡ್ ನಿಂದ ವಾಪಸ್ ಆದ ದರ್ಶನ್ ಗೆ ವಿವಿಐಪಿ ಭದ್ರತೆ: video

ಆ ಕ್ಷಣ ಶಾಶ್ವತವಾಗಿ ಅಚ್ಚೊತ್ತಿದೆ: ಸಂಸದರಾಗಿ ಪ್ರಮಾಣವಚನ ಸ್ವೀಕರಿಸಿದ ತಂದೆ ಬಗ್ಗೆ ಶ್ರುತಿ ಹಾಸನ್ ಹೆಮ್ಮೆ

ಪೂಜಾ, ಕಿಶನ್ ಮದುವೆ ಬೆನ್ನಲ್ಲೇ ಆದಿ, ಭಾಗ್ಯಗೇ ಮದುವೆ ಮಾಡುವಂತೆ ಡೈರೆಕ್ಟರ್‌ಗೆ ಫ್ಯಾನ್ಸ್ ಬೇಡಿಕೆ

ಮುಂದಿನ ಸುದ್ದಿ
Show comments