ಬೆಂಗಳೂರು: ಸಂಸದರಲ್ಲದೇ ಇದ್ದರೂ ಸೀದಾ ಪಾರ್ಲಿಮೆಂಟ್ ಗೆ ಎಂಟ್ರಿ ಕೊಡಲಿದ್ದಾರೆ ಶಿವಣ್ಣ. ಹೇಗೆ ಎಂದು ಇಲ್ಲಿದೆ ನೋಡಿ ಡೀಟೈಲ್ಸ್.
ಕ್ಯಾನ್ಸರ್ ಶಸ್ತ್ರಚಿಕಿತ್ಸೆ ಬಳಿಕ ಶಿವರಾಜ್ ಕುಮಾರ್ ಸಿನಿಮಾಗಳಿಂದ ಕೆಲವು ದಿನಗಳ ಕಾಲ ಬ್ರೇಕ್ ಪಡೆದಿದ್ದರು. ಬೆಂಗಳೂರು ಫಿಲಂ ಫೆಸ್ಟಿವಲ್ ನಲ್ಲಿ ಭಾಗಿಯಾಗಿದ್ದ ಶಿವಣ್ಣ ಚಿತ್ರೀಕರಣಕ್ಕೆ ಮರಳುವುದಾಗಿ ಘೋಷಿಸಿದ್ದರು.
ಇಂದಿನಿಂದ ಶಿವಣ್ಣ ಸಿನಿಮಾ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ. ತೆಲುಗಿನ ರಾಮ್ ಚರಣ್ ನಾಯಕರಾಗಿರುವ ಆರ್ ಸಿ16 ಸಿನಿಮಾದಲ್ಲಿ ಶಿವಣ್ಣ ವಿಶೇಷ ಪಾತ್ರ ಮಾಡುತ್ತಿದ್ದಾರೆ. ಈ ಸಿನಿಮಾದ ಚಿತ್ರೀಕರಣದಲ್ಲಿ ಇಂದಿನಿಂದ ಶಿವಣ್ಣ ಭಾಗಿಯಾಗಲಿದ್ದಾರೆ.
ಈ ಸಿನಿಮಾದ ಶೂಟಿಂಗ್ ದೆಹಲಿಯಲ್ಲಿ ಪಾರ್ಲಿಮೆಂಟ್ ಆವರಣದಲ್ಲಿ ನಡೆಯಲಿದೆ. ಇದಕ್ಕಾಗಿ ಒಪ್ಪಿಗೆ ಪಡೆಯುವ ಕೆಲಸಗಳು ನಡೆಯುತ್ತಿವೆ. ಹೀಗಾಗಿ ಶಿವಣ್ಣ ನೇರವಾಗಿ ಸಂಸದರಾಗದೇ ಪಾರ್ಲಿಮೆಂಟ್ ಆವರಣಕ್ಕೆ ಎಂಟ್ರಿ ಕೊಡಲಿದ್ದಾರೆ.