Select Your Language

Notifications

webdunia
webdunia
webdunia
webdunia

ಹುಟ್ಟುಹಬ್ಬ ದಿನ ಮನೆ ಹತ್ರ ಬರ್ಬೇಡಿ ಎನ್ನುವವರ ಮಧ್ಯೆ ಶಿವಣ್ಣ ತಾನೇ ಬೇರೆ ಎಂದು ತೋರಿಸಿಕೊಟ್ರು

Shiva Rajkumar
ಬೆಂಗಳೂರು: ಇತ್ತೀಚೆಗಿನ ದಿನಗಳಲ್ಲಿ ಸ್ಯಾಂಡಲ್ ವುಡ್ ನಟರು ನನ್ನ ಹುಟ್ಟುಹಬ್ಬ ದಿನ ಮನೆ ಹತ್ರ ಬರಬೇಡಿ ಎನ್ನುವವರೇ ಹೆಚ್ಚಾಗುತ್ತಿದ್ದಾರೆ. ಇದರ ನಡುವೆ ಶಿವಣ್ಣ ತಾನೇ ಡಿಫರೆಂಟ್ ಎಂದು ತೋರಿಸಿಕೊಟ್ಟಿದ್ದಾರೆ.

ತೀರಾ ಮೊನ್ನೆಯಷ್ಟೇ ಪ್ರಜ್ವಲ್ ದೇವರಾಜ್ ಇರಲಿ, ಗೋಲ್ಡನ್ ಸ್ಟಾರ್ ಗಣೇಶ್ ಇರಲಿ ಎಲ್ಲರೂ ಸಿನಿಮಾ ಕೆಲಸಗಳ ನೆಪ ಹೇಳಿ ಮನೆ ಹತ್ರ ಬರಬೇಡಿ ಎಂದು ಮನವಿ ಮಾಡಿಕೊಂಡವರೇ ಹೆಚ್ಚು. ಇದು ಅಭಿಮಾನಿಗಳ ಅಸಮಾಧಾನಕ್ಕೂ ಗುರಿಯಾಗಿತ್ತು. ಸಿನಿಮಾ ನೋಡಲು ಅಭಿಮಾನಿಗಳು ಬೇಕು, ಆದರೆ ವರ್ಷಕ್ಕೊಮ್ಮೆ ನಿಮ್ಮ ಹುಟ್ಟುಹಬ್ಬದ ದಿನ ಅಭಿಮಾನಿಗಳು ಮನೆ ಹತ್ರ ಬಂದರೆ ನಿಮಗೆ ಸಮಸ್ಯೆ ಎಂದು ಹಲವರು ಕಿಡಿ ಕಾರುತ್ತಲೇ ಇರುತ್ತಾರೆ.

ಆದರೆ ಇವರೆಲ್ಲರ ಮಧ್ಯೆ ಶಿವಣ್ಣ ತಾವು ಡಿಫರೆಂಟ್ ಎಂದು ತೋರಿಸಿಕೊಟ್ಟಿದ್ದಾರೆ. ಜುಲೈ 12 ರಂದು ಶಿವಣ್ಣ ಬರ್ತ್ ಡೇ ಇದೆ. ಇದು ದೊಡ್ಮನೆ ದೊಡ್ಡ ಮಗನ 64 ನೇ ಜನ್ಮದಿನ. ಪ್ರತೀ ವರ್ಷದಂತೆ ದೊಡ್ಮನೆ ಅಭಿಮಾನಿಗಳು ಅವರನ್ನು ನೋಡಲು ಕಾಯುತ್ತಿರುತ್ತಾರೆ.

ಹೀಗಾಗಿ ವಾರಕ್ಕೆ ಮುಂಚೆಯೇ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿರುವ ಶಿವಣ್ಣ ‘ಆವತ್ತು ಮನೆ ಹತ್ರ ಬನ್ನಿ ಸಿಗೋಣ. ಆದರೆ ಬರುವಾಗ ಯಾರೂ ಕೇಕ್, ಹಾರ ತೆಗೆದುಕೊಂಡು ಬರಬೇಡಿ. ನಿಮ್ಮೆಲ್ಲರ ಪರವಾಗಿ ನಾನೇ ಒಂದು ಕೇಕ್ ಕಟ್ ಮಾಡ್ತೇನೆ’ ಎಂದಿದ್ದಾರೆ. ಶಿವಣ್ಣನ ಪ್ರೀತಿಯ ಆಹ್ವಾನಕ್ಕೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನಾನು ಕನ್ನಡ ನಟ, ಕನ್ನಡ ನಟನಾಗಿಯೇ ಇರಲು ಇಷ್ಟಪಡುತ್ತೇನೆ: ಗೋಲ್ಡನ್ ಸ್ಟಾರ್ ಗಣೇಶ್ Video