Publish Date: Mon, 06 Jul 2026 (20:30 IST)
Updated Date: Mon, 06 Jul 2026 (20:42 IST)
ಬೆಂಗಳೂರು: ನಾನು ಕನ್ನಡ ನಟ, ಮೊದಲು ಕನ್ನಡದಲ್ಲೇ ಸಿನಿಮಾ ಮಾಡೋದು. ಇಲ್ಲಿ ಹಿಟ್ ಆದ್ರೆ ಮಾತ್ರ ಪ್ಯಾನ್ ಇಂಡಿಯಾ ಹೋಗೋದು.. ಹೀಗಂತ ಗೋಲ್ಡನ್ ಸ್ಟಾರ್ ಗಣೇಶ್ ಹೇಳಿದ್ದಾರೆ.
ಇಂದು ಪಿನಾಕ ಸಿನಿಮಾ ಪ್ರಿ ರಿಲೀಸ್ ಪತ್ರಿಕಾಗೋಷ್ಠಿಯಲ್ಲಿ ಅವರು ಸಿನಿಮಾ ಬಗ್ಗೆ ಮಾಹಿತಿ ನೀಡಿದ್ದಾರೆ. ಗೋಲ್ಡನ್ ಸ್ಟಾರ್ ಗಣೇಶ್ ನಾಯಕರಾಗಿರುವ ಪಿನಾಕ ಮತ್ತು ಬೃಂದಾ ವಿಹಾರಿ ಎರಡೂ ಸಿನಿಮಾಗಳೂ ಬಿಡುಗಡೆಗೆ ಸಿದ್ಧವಾಗಿದೆ. ಒಂದೇ ತಿಂಗಳು ಎರಡು ಸಿನಿಮಾಗಳು ರಿಲೀಸ್ ಆಗುತ್ತಿವೆ.
ಇತ್ತೀಚೆಗೆ ಎಲ್ಲಾ ಸ್ಟಾರ್ ನಟರೂ ತಮ್ಮ ಸಿನಿಮಾಗಳನ್ನು ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ಬಿಡುಗಡೆ ಮಾಡುತ್ತಿದ್ದಾರೆ. ಹೀಗಾಗಿ ಗಣೇಶ್ ಗೂ ಈ ಯೋಜನೆಯಿದೆಯೇ ಎಂದು ಪತ್ರಕರ್ತರು ಪ್ರಶ್ನಿಸಿದ್ದಾರೆ. ಈ ವೇಳೆ ಅವರು ನನಗೆ ಮೊದಲು ಕನ್ನಡವೇ ಆದ್ಯತೆ ಎಂದಿದ್ದಾರೆ.
ನನಗೆ ಮೊದಲು ನನ್ನ ಕನ್ನಡ ಸಿನಿಮಾ. ಇಲ್ಲಿ ಹಿಟ್ ಆದ್ರೆ ಪ್ಯಾನ್ ಇಂಡಿಯಾ. ಈ ಪಿಕ್ಚರ್ ಶೂಟಿಂಗ್ ಶುರು ಮಾಡಿದಾಗಿನಿಂದ ನಾವು ಮಾತಾಡಿಕೊಂಡಿದ್ದು ಇದು ಫಸ್ಟ್ ಕನ್ನಡದಲ್ಲಿ ರಿಲೀಸ್ ಮಾಡೋದು ಅಂತ. ಚೆನ್ನಾಗಿ ಆದ್ರೆ ಬೇರೆ ಭಾಷೆ ಮಾಡೋಣ.
ನಾನು ಕನ್ನಡದ ನಟ. ಎಂಥಾ ಪ್ಯಾನ್ ಇಂಡಿಯಾ ಬಂದ್ರೂ ನಾನು ಕನ್ನಡದ ನಟನೇ. ಕನ್ನಡದ ನಟನಾಗಿಯೇ ಇರಲು ಇಷ್ಟಪಡುತ್ತೇನೆ. ನನ್ನ ಸಿನಿಮಾ ಬೇರೆ ಭಾಷೆಗೆ ಹೋದ್ರೆ, ಬ್ಯುಸಿನೆಸ್ ಚೆನ್ನಾಗಿ ಆದರೆ ಆಗಲಿ. ಚೆನ್ನಾಗಿ ಆಗಿಲ್ಲ ಅಂದ್ರೆ ಬೇಸರವಿಲ್ಲ. ನನಗೆ ನನ್ನ ಕನ್ನಡದ ಅಭಿಮಾನಿಗಳಿದ್ದಾರೆ. ನನ್ನನ್ನು ಕಾಮಿಡಿ ಟೈಂನಿಂದ ಗೋಲ್ಡನ್ ಸ್ಟಾರ್ ವರೆಗೆ ಬೆಳೆಸಿದ ಕನ್ನಡ ಪ್ರೇಕ್ಷಕರಿದ್ದಾರೆ ಸಾಕು ಎಂದಿದ್ದಾರೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ