Select Your Language

Notifications

webdunia
webdunia
webdunia
webdunia

ಐ ಆಮ್ ಚೆನ್ನೈ ಬಾಯ್ ಎಂದ ಶಿವಣ್ಣ.. ಕಿಡಿಕಾರಿದ ನೆಟ್ಟಿಗರು, ಸಮರ್ಥಿಸಿದ ಕೆಲವರು Video

Shivanna
ಚೆನ್ನೈ: ಸಿನಿಮಾ ಕಾರ್ಯಕ್ರಮವೊಂದರ ವೇದಿಕೆಯಲ್ಲಿ ಶಿವಣ್ಣ ಐ ಆಮ್ ಚೆನ್ನೈ ಬಾಯ್ ಎಂದು ಹೇಳಿದ್ದ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಕೆಲವರು ಇದನ್ನು ವಿರೋಧಿಸಿದ್ದರೆ ಮತ್ತೆ ಕೆಲವರು ಸಮರ್ಥಿಸಿಕೊಂಡಿದ್ದಾರೆ.

 
ತಮಿಳು ಚಿತ್ರವೊಂದರ ಪ್ರಚಾರ ಅಥವಾ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿದ್ದ ಶಿವರಾಜ್‌ಕುಮಾರ್, ಅಲ್ಲಿನ ತಮಿಳು ಪ್ರೇಕ್ಷಕರನ್ನು ಉದ್ದೇಶಿಸಿ ಮಾತನಾಡುವಾಗ ಭಾವುಕರಾಗಿ, "ನಾನು ಹುಟ್ಟಿ ಬೆಳೆದಿದ್ದೆಲ್ಲಾ ಚೆನ್ನೈನಲ್ಲೇ, ಹಾಗಾಗಿ ನಾನು ಚೆನ್ನೈ ಹುಡುಗ" ಎಂಬರ್ಥದಲ್ಲಿ ಮಾತನಾಡಿದ್ದರು. (ಡಾ. ರಾಜ್‌ಕುಮಾರ್ ಕುಟುಂಬವು ಆರಂಭದ ದಿನಗಳಲ್ಲಿ ಮದ್ರಾಸ್‌ನಲ್ಲಿ (ಈಗಿನ ಚೆನ್ನೈ) ನೆಲೆಸಿದ್ದರಿಂದ ಶಿವಣ್ಣ ಅವರ ಬಾಲ್ಯ ಮತ್ತು ವಿದ್ಯಾಭ್ಯಾಸದ ಕೆಲವು ವರ್ಷಗಳು ಅಲ್ಲಿಯೇ ಕಳೆದಿದ್ದವು). ಈ ವಿಡಿಯೋ ಯಾವಾಗಿನದ್ದು ಎನ್ನುವುದು ಸ್ಪಷ್ಟವಾಗಿಲ್ಲ.

ಆದರೆ ಶಿವಣ್ಣ ಹೇಳಿಕೆಯ ವಿಡಿಯೋ ವೈರಲ್ ಆಗಿದ್ದು ಇದಕ್ಕೆ ನೆಟ್ಟಿಗರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಣ್ಣಾವ್ರು ಕೂಡಾ ಮದ್ರಾಸ್ ನಲ್ಲಿದ್ದರು. ಆದರೆ ಒಮ್ಮೆಯೂ ನಾನು ಮದರಾಸಿ ಎಂದು ಹೇಳಿರಲಿಲ್ಲ. ಆದರೆ ನೀವು ಚೆನ್ನೈನಲ್ಲಿ ಹುಟ್ಟಿ ಬೆಳೆದಿದ್ದೆ ಎಂಬ ಕಾರಣಕ್ಕೆ ಚೆನ್ನೈ ಹುಡುಗ ಎಂದು ಹೇಳಿದ್ದು ಸರಿಯಲ್ಲ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ. 

ಇದೇ ವೇಳೆ ಶಿವಣ್ಣ ಅವರ ಅಭಿಮಾನಿಗಳು ಅವರ ಬೆಂಬಲಕ್ಕೆ ನಿಂತಿದ್ದಾರೆ. "ಶಿವಣ್ಣ ಅವರು ಹುಟ್ಟಿದ್ದು ಮದ್ರಾಸ್‌ನಲ್ಲಿ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಅವರು ಕೇವಲ ತಾವು ಹುಟ್ಟಿ ಬೆಳೆದ ನೆನಪುಗಳನ್ನು ಹಂಚಿಕೊಂಡಿದ್ದಾರೆಯೇ ಹೊರತು ಕನ್ನಡದ ಮೇಲಿನ ಪ್ರೀತಿಯನ್ನೇನೂ ಕಮ್ಮಿ ಮಾಡಿಕೊಂಡಿಲ್ಲ. ಇದನ್ನು ಇಷ್ಟೊಂದು ವಿವಾದ ಮಾಡಬೇಕಾದ ಅಗತ್ಯವಿಲ್ಲ" ಎಂದು ಅಭಿಮಾನಿಗಳು ಸಮರ್ಥಿಸಿಕೊಂಡಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಮಕ್ಕಳು, ಕುಟುಂಬದವರ ಸಮ್ಮುಖದಲ್ಲಿ ಮೂರನೇ ಮದುವೆಯಾದ ಅಮೀರ್ ಖಾನ್