Select Your Language

Notifications

webdunia
webdunia
webdunia
webdunia

ಅಭಿಮಾನಿಗಳಿಂದ ಸಾಕ್ಷಿಗೆ ಬೆದರಿಕೆ ಹುಚ್ಚಾಟ ಒಂದೆಡೆಯಾದರೆ ನಟ ದರ್ಶನ್ ಗೆ ಮತ್ತೊಂದು ಶಾಕ್ ಕೊಟ್ಟ ಕೋರ್ಟ್

Darshan in jail
ಬೆಂಗಳೂರು: ಒಂದೆಡೆ ಸಾಕ್ಷಿಗೆ ಬೆದರಿಕೆ ಹಾಕಿ ಅಭಿಮಾನಿಗಳಿಂದ ಹುಚ್ಚಾಟವಾದರೆ ಇನ್ನೊಂದೆಡೆ ಕೋರ್ಟ್ ಕೂಡಾ ನಟ ದರ್ಶನ್ ಗೆ ಶಾಕ್ ಕೊಟ್ಟಿದೆ.

ರೇಣುಕಾಸ್ವಾಮಿ ಮರ್ಡರ್ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್ ಗೆ ಯಾಕೋ ಸದ್ಯಕ್ಕೆ ಬಿಡುಗಡೆ ಭಾಗ್ಯವಿದ್ದಂತೆ ತೋರುತ್ತಿಲ್ಲ. ಸುಪ್ರೀಂಕೋರ್ಟ್ ಈ ಹಿಂದೆ ಸಾಕ್ಷಿಗಳ ವಿಚಾರಣೆ ಆಗುವವರೆಗೆ ಜಾಮೀನು ಇಲ್ಲ ಎಂದಿತ್ತು. ಸಾಕ್ಷಿಗಳ ವಿಚಾರಣೆಗೆ ಒಂದು ವರ್ಷದ ಕಾಲಾವಧಿಯನ್ನೂ ನೀಡಿತ್ತು. ಹೀಗಾಗಿ ಒಂದು ವರ್ಷದವರೆಗೆ ದರ್ಶನ್ ಗೆ ಜಾಮೀನು ಸಿಗಲ್ಲ ಎನ್ನಲಾಗಿತ್ತು.

ಹಾಗಿದ್ದರೂ ದರ್ಶನ್ ಪ್ರಯತ್ನ ಮಾತ್ರ ಬಿಟ್ಟಿಲ್ಲ. ಇದೀಗ ಹೊಸದಾಗಿ ಮತ್ತೊಮ್ಮೆ ಜಾಮೀನಿಗೆ ಪ್ರಾಥಮಿಕ ಅರ್ಜಿ ಸಲ್ಲಿಸಿದ್ದರು. ಆದರೆ ಇದನ್ನು ಈಗ ಸುಪ್ರೀಂಕೋರ್ಟ್ ತಳ್ಳಿ ಹಾಕಿದ್ದು ನಟ ದರ್ಶನ್ ಗೆ ಮತ್ತೆ ನಿರಾಸೆಯಾಗಿದೆ.

ಇತ್ತ ಇನ್ನೊಂದೆಡೆ ವಿಚಾರಣೆ ನಡೆಯುತ್ತಿರುವಾಗಲೇ ದರ್ಶನ್ ಅಭಿಮಾನಿಗಳಂದು ಹೇಳಿಕೊಂಡಿರುವ ಮೂವರು 49 ನೇ ಸಾಕ್ಷಿಗೆ ತಾವು ಹೇಳಿದಂತೆ ಸಾಕ್ಷಿ ಹೇಳುವಂತೆ ಬೆದರಿಕೆ ಹಾಕಿ ಅರೆಸ್ಟ್ ಆಗಿದ್ದಾರೆ. ಇದೂ ಕೂಡಾ ದರ್ಶನ್ ಗೆ ಸಂಕಷ್ಟ ತಂದೊಡ್ಡಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮೊದಲ ಸಿನಿಮಾದಲ್ಲಿ ಟ್ರೋಲ್ ಆಗಿದ್ದ ವಿನಯ್ ರಾಜ್ ಕುಮಾರ್: ಗ್ರಾಮಾಯಣ ಸಿನಿಮಾ ನೋಡಿದ ಪ್ರೇಕ್ಷಕರು ಏನಂದ್ರು ಗೊತ್ತಾ