Publish Date: Mon, 29 Jun 2026 (18:49 IST)
Updated Date: Mon, 29 Jun 2026 (18:56 IST)
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ಪತಿ ದರ್ಶನ್ ಅವರನ್ನು ಹೊರ ಕರೆದುಕೊಂಡು ಬರಲು ಪತ್ನಿ ವಿಜಯಲಕ್ಷ್ಮಿ ಕಾನೂನು ಹೋರಾಟ ನಡೆಸುತ್ತಲೇ ಬಂದಿದ್ದಾರೆ. ಆಗಾಗ ದೇವರ ಮೊರೆ ಹೋಗುತ್ತಿರುವ ವಿಜಯಲಕ್ಷ್ಮಿ ಕುಟುಂಬದ ಜವಾಬ್ದಾರಿಯನ್ನು ಹೊತ್ತುಕೊಂಡು, ಆಗಾಗ ಪತಿಯನ್ನು ನೋಡಲು ಜೈಲಿಗೂ ಬರುತ್ತಿರುತ್ತಾರೆ.
ಇದೀಗ ಪತಿ ನೆನೆದು ದರ್ಶನ್ ಜತೆಗಿನ ಫೋಟೋ ಹಂಚಿಕೊಂಡು ಅದಲ್ಲಿ ರೋಮ್ಯಾಂಟಿಕ್ ಹಾಡನ್ನು ಬ್ಯಾಗ್ರೌಂಡ್‌ನ್ನು ಹಾಕಿದ್ದಾರೆ.
ಸೋಮವಾರ ಬೆಳ್ಳಗ್ಗೆಯೇ ಇನ್ಸ್ಟಾಗ್ರಾಂನಲ್ಲಿ ತಮ್ಮ ಜೋಡಿಯ ಫೋಟೋ ಶೇರ್ ಮಾಡಿರೋ ವಿಜಯಲಕ್ಷ್ಮಿ ಆ ಫೋಟೋಗೆ ತಾರಕ್ ಚಿತ್ರದ 'ಹೇಗಾದರೂ ಮಾತಾಡು ನೀ' ಹಾಡನ್ನ ಹಾಕಿದ್ದಾರೆ. ಜಯಂತ್ ಕಾಯ್ಕಿಣಿ ರಚಿತ ಗೀತೆಯಲ್ಲಿ ದರ್ಶನ್ ಸಾನ್ವಿ ಶ್ರೀವಾತ್ಸವ್ ಜೋಡಿ ಅಭಿನಯಿಸಿದೆ. ತಾರಕ್ ಚಿತ್ರದ ಹಾಡಿನ ಮಧುರ ಪಲ್ಲವಿಯನ್ನ ತಮ್ಮದೇ ಜೋಡಿ ಫೋಟೋ ಬ್ಯಾಗ್ರೌಂಡ್‌ನಲ್ಲಿ ಪೋಸ್ಟ್ ಮಾಡಿದ್ದಾರೆ ವಿಜಯಲಕ್ಷ್ಮಿ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನಿಂದ ಬೇಲ್ ಕ್ಯಾನ್ಸಲ್ ಆದ ಬಳಿಕ ದರ್ಶನ್ ಪರಪ್ಪನ ಅಗ್ರಹಾರ ಸೇರಿದ್ದರು. 2025ರ ಆಗಸ್ಟ್ 14 ರಿಂದ ಇಲ್ಲಿಯವರೆಗೂ ಸತತವಾಗಿ ದರ್ಶನ್ ಜೈಲಲ್ಲೇ ಇದ್ದಾರೆ.
ವಾರಕ್ಕೆರಡು ಬಾರಿ ಪತಿ ದರ್ಶನ್ ಭೇಟಿಯನ್ನು ವಿಜಯಲಕ್ಷ್ಮಿ ಮಿಸ್ ಮಾಡೋದಿಲ್ಲ. ಇದೀಗ ದರ್ಶನ್ ಹೆಚ್ಚು ನೆನಪಾದಂತಿದೆ. ಹೀಗಾಗಿ ಕಪಲ್ ಫೋಟೋವನ್ನ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಶೇರ್ ಮಾಡಿದ್ದಾರೆ.
About Writer
ಸಂಪ್ರಿಯ
ಕನ್ನಡ ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷದಲ್ಲಿ ಬೇರೆ ಬೇರೆ ಸಂಸ್ಥೆಗಳಲ್ಲಿ ರಿಪೋರ್ಟರ್ ಆಗಿ, ಸಬ್ ಎಡಿಟರ್ ಆಗಿ, ಇದೀಗ ಕಂಟೆಂಟ್ ರೈಟರ್ ಆಗಿ ವೆಬ್ದುನಿಯಾದಲ್ಲಿ ಕೆಲಸ. ಆಳ್ವಾಸ್ ಕಾಲೇಜಿನಲ್ಲಿ ಸಮೂಹ ಸಂವಹನ ಮತ್ತು ಪತ್ರಿಕೋಧ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು 2016ನೇ ಸಾಲಿನಲ್ಲಿ ಪಡೆದಿರುತ್ತೇನೆ. ಮನರಂಜನೆ, ಲೈಫ್ಸ್ಟೈಲ್, ರಾಜಕೀಯ ಸುದ್ದಿಗಳ ಬಗ್ಗೆ ವಿಶೇಷ ಆಸಕ್ತಿ. ....
ಮತ್ತಷ್ಟು ಓದಿ