Daily Horoscope

Select Your Language

Notifications

webdunia
webdunia
webdunia
webdunia

ಪಡೆದುಕೊಂಡ ಮೇಲೆ.. ಊಹಾಪೋಹಗಳ ನಡುವೆ ಆ ನಟನಿಗೆ ಟಾಂಗ್ ಕೊಟ್ರಾ ವಿಜಯಲಕ್ಷ್ಮಿ ದರ್ಶನ್

Vijayalakshmi Darshan
ಬೆಂಗಳೂರು: ಪಡೆದುಕೊಂಡ ಮೇಲೆ ನಡೆದುಕೊಳ್ಳುವ ರೀತಿ ಚೆನ್ನಾಗಿರಲಿ ಎಂದು ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ಇತ್ತೀಚೆಗೆ ದರ್ಶನ್ ಜೊತೆಗೆ ಆಪ್ತರಾಗಿದ್ದ ಆ ಒಬ್ಬ ನಟನೊಂದಿಗೆ ವೈಮನಸ್ಯವಾಗಿದೆ ಎಂಬ ಗುಸು ಗುಸು ಕೇಳಿಬರುತ್ತಿದೆ. ಆದರೆ ಈ ಬಗ್ಗೆ ಎರಡೂ ಕಡೆಯಿಂದ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ. ಈ ನಡುವೆ ವಿಜಯಲಕ್ಷ್ಮಿ ಇನ್ ಸ್ಟಾಗ್ರಾಂ ಸ್ಟೋರಿಯೊಂದು ಗಮನ ಸೆಳೆಯುತ್ತಿದೆ.

webdunia
ವಿಜಯಲಕ್ಷ್ಮಿ ದರ್ಶನ್ ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿದ್ದಾರೆ. ತಮ್ಮ ಪತಿ, ಮಗನ ಬಗ್ಗೆ ಆಗಾಗ ಪೋಸ್ಟ್ ಹಂಚಿಕೊಳ್ಳುತ್ತಿರುತ್ತಾರೆ. ತಮಗೆ ನೋವಾದರೂ ಅದನ್ನು ಇನ್ ಸ್ಟಾಗ್ರಾಂ ಪೋಸ್ಟ್ ಮೂಲಕ ಸಂದೇಶ ಬರೆಯುವ ಮೂಲಕ ಹಂಚಿಕೊಳ್ಳುತ್ತಾರೆ.

ಇದೀಗ ವಿಜಯಲಕ್ಷ್ಮಿ ‘ಪಡೆದುಕೊಂಡ ಮೇಲೆ.. ನಡೆದುಕೊಳ್ಳುವ ರೀತಿ ಚೆನ್ನಾಗಿರಲಿ.. ಅದು ವಸ್ತುವಾಗಲಿ, ವ್ಯಕ್ತಿಯಾಗಲಿ..’ ಎಂದು ಬರೆದುಕೊಂಡಿದ್ದಾರೆ. ಅವರು ಈ ರೀತಿ ನುಡಿಮುತ್ತೊಂದನ್ನು ಬರೆದುಕೊಂಡಿದ್ದರೂ ಇದು ಯಾರನ್ನೋ ಉದ್ದೇಶಿಸಿ ಬರೆದಂತಿದೆ. ಆದರೆ ಈ ಬಗ್ಗೆ ಸ್ಪಷ್ಟತೆಯಿಲ್ಲ. ಆದರೆ ಅಭಿಮಾನಿಗಳು ಮಾತ್ರ ಈ ಸಾಲುಗಳನ್ನು ತಮ್ಮದೇ ರೀತಿಯಲ್ಲಿ ಚರ್ಚೆ ಮಾಡುತ್ತಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಅಭಿಮಾನಿಗಳಿಂದ ಸಾಕ್ಷಿಗೆ ಬೆದರಿಕೆ ಹುಚ್ಚಾಟ ಒಂದೆಡೆಯಾದರೆ ನಟ ದರ್ಶನ್ ಗೆ ಮತ್ತೊಂದು ಶಾಕ್ ಕೊಟ್ಟ ಕೋರ್ಟ್