Select Your Language

Notifications

webdunia
webdunia
webdunia
webdunia

ಶಿವಣ್ಣ ಕ್ಯಾನ್ಸರ್‌ ಚಿಕಿತ್ಸೆಗೆ ಆರು ಆಪರೇಷನ್‌ ಮಾಡಿ ಬರೋಬ್ಬರಿ 190 ಹೊಲಿಗೆ ಹಾಕಿದ ವೈದ್ಯರು

Hat-trick hero

Sampriya

ಬೆಂಗಳೂರು , ಬುಧವಾರ, 15 ಜನವರಿ 2025 (14:25 IST)
ಬೆಂಗಳೂರು: ಕ್ಯಾನ್ಸರ್‌ ಚಿಕಿತ್ಸೆಗೆ ಅಮೆರಿಕಾಕ್ಕೆ ತೆರಳಿದ್ದ ಹ್ಯಾಟ್ರಿಕ್‌ ಹೀರೊ ನಟ ಶಿವರಾಜ್‌ಕುಮಾರ್‌ ಅವರಿಗೆ ಆರು ಆಪರೇಷನ್‌ ಮಾಡಿ 190 ಹೊಲಿಗೆ ಹಾಕಲಾಗಿದೆ. ಅವರು ಚೇತರಿಸಿಕೊಳ್ಳುತ್ತಿದ್ದು, ಶೀಘ್ರದಲ್ಲೇ ಭಾರತಕ್ಕೆ ವಾಪಸಾಗಲಿದ್ದಾರೆ.

ಶಿವಣ್ಣ ಅವರ ತಲೆಯಲ್ಲಿ ಒಂದು ಸ್ಟಂಟ್ ಇದೆ. ಹೃದಯದಲ್ಲಿ ಒಂದು ಸ್ಟಂಟ್ ಇದ್ದು ಜ.25 ರಂದು ಬೆಂಗಳೂರಿಗೆ ಬರುತ್ತಾರೆ ಎಂದು ಅವರ ಭಾವ ಮಧು ಬಂಗಾರಪ್ಪ ಹೇಳಿದ್ದಾರೆ.

ಶಿವಣ್ಣ ಅವರಿಗೆ ಐದೂವರೆ ಗಂಟೆ ಆಪರೇಷನ್‌ಗೆ ವೈದ್ಯರು ಪ್ಲ್ಯಾನ್‌ ಮಾಡಿದ್ದರು. ಆದರೆ ನಾಲ್ಕು ಮುಕ್ಕಾಲು ಗಂಟೆಗೆ ಆಪರೇಷನ್‌ ಮುಗಿಯಿತು. ಮ್ಯಾನ್ಯುವಲಿ ಮಾಡಬೇಕಾ? ಅಥವಾ ರೋಬೋಟಿಕ್ ಮಾಡಬೇಕಾ ಅಂತ ಎರಡು ಚರ್ಚೆ ನಡೆಯಿತು. ರೋಬೋಟಿಕ್‌ ಆದರೆ ಏಳೆಂಟು ಹೋಲ್ ಮಾಡಿ ದೇಹವನ್ನು ಉಲ್ಟಾ ಮಲಗಿಸಿ ಮಾಡುತ್ತಾರೆ. ಕೊನೆಗೆ ಮ್ಯಾನ್ಯುವಲ್ ಮಾಡೋದು ಸೂಕ್ತ ಅಂತ ನಿರ್ಧಾರ ಮಾಡಲಾಯಿತು ಎಂದು ಮಧು ಹೇಳಿದರು.

ಶಿವಣ್ಣ ಅವರಿಗೆ ಈಗ 63 ವಯಸ್ಸು. ಆದರೆ, ಅಮೆರಿಕಾದಿಂದ ವಾಪಸ್ ಬಂದಮೇಲೆ 36 ರ ರೀತಿ ಕಾಣಿಸುತ್ತಾರೆ. ವೈದ್ಯರ ನಮ್ಮ ಕುಟುಂಬದ ಸದಸ್ಯರಂತೆ ಇದ್ದರು. ಶಿವಣ್ಣ ಫೋಟೋ ಜೊತೆಗೆ ವೈದ್ಯರ ಫೋಟೋ ಕೂಡ ಇಲ್ಲಿ ಅಭಿಮಾನಿಗಳು ಪೂಜೆ ಮಾಡಿದ್ದರು. ಅದನ್ನು ನೋಡಿ ವೈದ್ಯರು ಕೂಡ ಕಣ್ಣೀರು ಹಾಕಿಕೊಂಡರು ಎಂದರು.

Share this Story:

Follow Webdunia kannada

ಮುಂದಿನ ಸುದ್ದಿ

ಮಣಿಪಾಲ್ ಆಸ್ಪತ್ರೆಗೆ ದರ್ಶನ್: ಎರಡೇ ದಿನದಲ್ಲಿ ನಿರ್ಧಾರವಾಗಲಿದೆ ದಾಸನ ಭವಿಷ್ಯ