Select Your Language

Notifications

webdunia
webdunia
webdunia
webdunia

ಕ್ಯಾನ್ಸರ್‌ ಚಿಕಿತ್ಸೆ ಬಗ್ಗೆ ವದಂತಿ: ನವಜೋತ್ ಸಿದ್ದು ದಂಪತಿ ಗೆ ₹855 ಕೋಟಿಯ ನೋಟಿಸ್‌

Congress leader and former cricketer Navjot Singh Sidhu, Wife Cancer Treatment, Chhattisgarh Civil Society,

Sampriya

ಛತ್ತೀಸ್‌ಗಢ , ಶುಕ್ರವಾರ, 29 ನವೆಂಬರ್ 2024 (19:25 IST)
Photo Courtesy X
ಛತ್ತೀಸ್‌ಗಡ: ನಾಲ್ಕನೇ ಹಂತದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಪತ್ನಿ ಮನೆ ಮದ್ದುವಿನಿಂದಾಗಿ ಗುಣಮುಖರಾಗಿರುವ ಸಂಗತಿಯನ್ನು ಹಂಚಿಕೊಂಡಿದ್ದ ಕ್ರಿಕೆಟರ್ ಹಾಗೂ ಕಾಂಗ್ರೆಸ್ ನಾಯಕ ನವಜೋತ್‌ ಸಿಂಗ್ ಸಿದ್ದು ಹಾಗೂ ಪತ್ನಿಗೆ ಛತ್ತೀಸಗಡ ನಾಗರಿಕ ಸಮಾಜ ₹850 ಕೋಟಿ ಪರಿಹಾರದ ನೋಟಿಸ್ ಕಳುಹಿಸಿದೆ.

ಸಿಸಿಎಚ್ ಸಂಚಾಲಕ ಡಾ.ಕುಲದೀಪ್ ಸೋಲಂಕಿ ಅವರು ಈ ಕುರಿತು ಪ್ರತಿಕ್ರಿಯಿಸಿ, ಸಿದ್ದು ದಂಪತಿ ಅವರು ಕ್ಯಾನ್ಸರ್‌ ರೋಗದ ಬಗ್ಗೆ ಸುಳ್ಳು ಮಾಹಿತಿಯನ್ನು ಪ್ರಚಾರ ಮಾಡುವ ಮೂಲಕ ಜನರಲ್ಲಿ ಗೊಂದಲಕ್ಕೆ ಸಿಲುಕಿಸಿದ್ದಾರೆ. ಇವರ ಹೇಳಿಕೆಯಿಂದ ಕ್ಯಾನ್ಸರ್ ಬಗೆಗಿನ ಚಿಕಿತ್ಸೆಗಳ ಕುರಿತು ನಕಾರಾತ್ಮಕ ಮನೋಭಾವ ಸೃಷ್ಟಿಯಾಗುವಂತೆ ಮಾಡಿದ್ದಾರೆ. ಇವರ ಹೇಳಿಕೆಯಿಂದ ಕ್ಯಾನ್ಸರ್‌ ರೋಗಿಗಳು ಚಿಕಿತ್ಸೆಯನ್ನು ಕೈಬಿಟ್ಟು, ಇವರು ಹೇಳುವ ಮನೆಮದ್ದು ಸೇವಿಸುವುದರಿಂದ ಸಾವಿಗೆ ತುತ್ತಾಗುವ ಸಾಧ್ಯತೆಯೂ ಹೆಚ್ಚು ಎಂದು ಹೇಳಿದೆ.

CCS ಸಿಧು ಅವರಿಂದ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದೆ ಮತ್ತು ಏಳು ದಿನಗಳಲ್ಲಿ ಕೌರ್ ತನ್ನ ಪತಿ ಮಾಡಿದ ವಿವಾದಾತ್ಮಕ ಹಕ್ಕುಗಳನ್ನು ಬೆಂಬಲಿಸಲು ಪುರಾವೆಗಳನ್ನು ಪ್ರಸ್ತುತಪಡಿಸದ ಹೊರತು ಅವರ ವಿರುದ್ಧ ಕಾನೂನು ಕ್ರಮ ಜರುಗಿಸುವುದಾಗಿ ಬೆದರಿಕೆ ಹಾಕಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಉತ್ತರ ಪ್ರದೇಶ: ನರ್ಸ್‌ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಗುಪ್ತಾಂಗಕ್ಕೆ ಕೋಲು, ಮೆಣಸಿನ ಪುಡಿ ಎರಚಿ ಕ್ರೌರ್ಯ