Select Your Language

Notifications

webdunia
webdunia
webdunia
webdunia

ಪ್ರಮಾಣ ವಚನ ವೇಳೆ ಅಣ್ಣ ರಾಹುಲ್ ಗಾಂಧಿಯನ್ನೇ ಕಾಪಿ ಮಾಡಿದ ಪ್ರಿಯಾಂಕ ವಾದ್ರಾ: ವಿಡಿಯೋ

Priyanka Vadra

Krishnaveni K

ನವದೆಹಲಿ , ಗುರುವಾರ, 28 ನವೆಂಬರ್ 2024 (11:20 IST)
Photo Credit: X
ನವದೆಹಲಿ: ವಯನಾಡು ಲೋಕಸಭೆಯ ಸಂಸದೆಯಾಗಿ ಇಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ವಾದ್ರಾ ಪ್ರಮಾಣ ವಚನ ಸ್ವೀಕರಿಸಿದರು. ಈ ವೇಳೆ ಅಣ್ಣ ರಾಹುಲ್ ಗಾಂಧಿಯಂತೇ ಕೈಯಲ್ಲಿ ಸಂವಿಧಾನ ಪುಸ್ತಕ ಹಿಡಿದು ಬಂದಿದ್ದರು.

ಈ ಹಿಂದೆ ರಾಹುಲ ಗಾಂಧಿ ಕೂಡಾ ಸಂವಿಧಾನ ಪುಸ್ತಕ ಕೈಯಲ್ಲಿ ಹಿಡಿದು ಪ್ರಮಾಣ ವಚನ ಸ್ವೀಕರಿಸುವ ಮೂಲಕ ಮೋದಿ ಸರ್ಕಾರಕ್ಕೆ ಟಾಂಗ್ ನೀಡಿದ್ದರು. ಈಗ ಪ್ರಿಯಾಂಕ ಕೂಡಾ ಸಂವಿಧಾನ ಪುಸ್ತಕವನ್ನು ಕೈಯಲ್ಲಿ ಎತ್ತಿ ಹಿಡಿದುಕೊಂಡು ಪ್ರಮಾಣ ವಚನ ಸ್ವೀಕರಿಸುವ ಮೂಲಕ ಅಣ್ಣನ ಹಾದಿಯನ್ನೇ ಹಿಡಿದಿದ್ದಾರೆ.

ಇತ್ತೀಚೆಗೆ ವಯನಾಡು ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಸ್ಪರ್ಧಿಸಿದ್ದ ಪ್ರಿಯಾಂಕ ಭರ್ಜರಿ ಮತಗಳಿಂದ ಗೆದ್ದಿದ್ದರು. ಇದೇ ಮೊದಲ ಬಾರಿಗೆ ಅವರು ಚುನಾವಣಾ ಕಣಕ್ಕಿಳಿದಿದ್ದರು. ಇದೇ ಮೊದಲ ಬಾರಿಗೆ ಸಂಸತ್ ಸದಸ್ಯೆಯಾಗಿ ಆಯ್ಕೆಯಾಗಿರುವ ಪ್ರಿಯಾಂಕ ಇಂದು ಲೋಕಸಭೆಯಲ್ಲಿ ಪ್ರಮಾಣ  ವಚನ ಸ್ವೀಕರಿಸಿದ್ದಾರೆ.

ಕೇರಳದ ಸಂಸದೆಯಾಗಿರುವ ಪ್ರಿಯಾಂಕ ಕೇರಳ ಶೈಲಿಯ ಸೀರೆಯಿಟ್ಟುಕೊಂಡು ಬಂದಿದ್ದು ವಿಶೇಷವಾಗಿತ್ತು. ಇದೀಗ ಅಣ್ಣ ರಾಹುಲ್ ಗಾಂಧಿ ಜೊತೆ ಅವರೂ ಲೋಕಸಭೆ ಕಲಾಪದಲ್ಲಿ ಭಾಗಿಯಾಗಲಿದ್ದಾರೆ. ಅವರ ಪ್ರಮಾಣ ವಚನದ ವಿಡಿಯೋ ಇಲ್ಲಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಪ್ರಿಯಾಂಕ ಗಾಂಧಿ ಇಂದು ಲೋಕಸಭೆಗೆ ಎಂಟ್ರಿ: ಸಂಸತ್ ನಲ್ಲಿ ಫ್ಯಾಮಿಲಿ ಸಮೇತ ಇರುವವರ ಲಿಸ್ಟ್ ಇಲ್ಲಿದೆ