Select Your Language

Notifications

webdunia
webdunia
webdunia
Monday, 7 April 2025
webdunia

ದೀಪಿಕಾ ದಾಸ್ ಮದುವೆ ಬೆನ್ನಲ್ಲೇ ಶೈನ್ ಶೆಟ್ಟಿ ಪೋಸ್ಟ್ ವೈರಲ್

Shine Shetty

Krishnaveni K

ಬೆಂಗಳೂರು , ಬುಧವಾರ, 13 ಮಾರ್ಚ್ 2024 (14:13 IST)
Photo Courtesy: Instagram
ಬೆಂಗಳೂರು: ಬಿಗ್ ಬಾಸ್ ಖ್ಯಾತಿಯ ನಟಿ ದೀಪಿಕಾ ದಾಸ್ ಮದುವೆಯಾದ ಬೆನ್ನಲ್ಲೇ ದೀಪಿಕಾಗೆ ಆಪ್ತರಾಗಿದ್ದ ನಟ ಶೈನ್ ಶೆಟ್ಟಿ ಇನ್ ಸ್ಟಾಗ್ರಾಂನಲ್ಲಿ ಪ್ರಕಟಿಸಿದ ಪೋಸ್ಟ್ ಒಂದು ಈಗ ವೈರಲ್ ಆಗಿದೆ.

ಬಿಗ್ ಬಾಸ್ ಮನೆಯಲ್ಲಿ ಶೈನ್ ಶೆಟ್ಟಿ ಮತ್ತು ದೀಪಿಕಾ ದಾಸ್ ತುಂಬಾ ಆತ್ಮೀಯವಾಗಿದ್ದರು. ಇವರಿಬ್ಬರೂ ನಿಜ ಜೀವನದಲ್ಲೂ ಜೋಡಿಯಾಗಲಿ ಎಂದು ಎಷ್ಟೋ ಜನ ಹಾರೈಸಿದ್ದರು. ಕೆಲವರು ಇಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ ಎಂದೂ ಅಂದುಕೊಂಡಿದ್ದರು.

ಆದರೆ ಮೊನ್ನೆಯಷ್ಟೇ ದೀಪಕಾ ದಾಸ್ ತಾವು ಪ್ರೀತಿಸಿದ ದೀಪಕ್ ಜೊತೆ ಸಪ್ತಪದಿ ತುಳಿದರು. ಅವರ ಮದುವೆ ಎಲ್ಲರಿಗೂ ಸರ್ಪೈಸ್ ಆಗಿತ್ತು. ಕೆಲವರು ನೇರವಾಗಿಯೇ ನೀವು ಶೈನ್ ಅವರನ್ನು ಮದುವೆಯಾಗಬೇಕಿತ್ತು ಎಂದು ಹೇಳಿದವರೂ ಇದ್ದರು. ವಾರದ ಬಳಿಕ ದೀಪಿಕಾ ದಾಸ್ ತಮ್ಮ ಸ್ನೇಹಿತರಿಗಾಗಿ ರಿಸೆಪ್ಷನ್ ಇಟ್ಟುಕೊಂಡಿದ್ದರು. ಈ ರಿಸೆಪ್ಞನ್ ಗೆ ಶೈನ್ ಶೆಟ್ಟಿ ಹೊರತುಪಡಿಸಿ ಉಳಿದೆಲ್ಲಾ ಬಿಗ್ ಬಾಸ್ ಸ್ನೇಹಿತರು ಬಂದಿದ್ದು ಎಲ್ಲರೂ ಹುಬ್ಬೇರಿಸುವಂತೆ ಮಾಡಿತ್ತು.

ಇದೀಗ ಶೈನ್ ತಮ್ಮ ಇನ್ ಸ್ಟಾ ಪುಟದಲ್ಲಿ ‘ಅವರದ್ದು ಆಯ್ತಂತೆ ನಿಂದ್ಯಾವಾಗ ಮರ್ಯಾದೆ ಪ್ರಶ್ನೆ’ ಎಂದು ಸಂದೇಶ ಬರೆದುಕೊಂಡಿದ್ದಾರೆ. ಇದು ದೀಪಿಕಾ ಮದುವೆಯನ್ನುದ್ದೇಶಿಸಿಯೇ ಹೇಳಿದ್ದು ಎಂದು ನೆಟ್ಟಿಗರು ಪತ್ತೆ ಮಾಡಿದ್ದಾರೆ. ಜೊತೆಗೆ ಶೈನ್ ತಮ್ಮ ಮದುವೆ ಬಗ್ಗೆಯೂ ಸುಳಿವು ಕೊಟ್ಟಿರಬಹುದಾ ಎಂದು ತಲೆಕೆರೆದುಕೊಂಡಿದ್ದಾರೆ. ಅಂತೂ ಶೈನ್ ಮಾಡಿದ ಈ ಪೋಸ್ಟ್ ಈಗ ವೈರಲ್ ಆಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಖ್ಯಾತ ಫೈಟ್ ಮಾಸ್ಟರ್ ರವಿ ವರ್ಮ ವಿರುದ್ಧ ಕೊಲೆ ಬೆದರಿಕೆ ಆರೋಪ: ದೂರು ದಾಖಲು