Publish Date: Mon, 11 Mar 2024 (09:19 IST)
Updated Date: Mon, 11 Mar 2024 (09:22 IST)
ಬೆಂಗಳೂರು: ಇತ್ತೀಚೆಗೆ ಗೋವಾದಲ್ಲಿ ಮದುವೆಯಾಗಿದ್ದ ನಟಿ ದೀಪಿಕಾ ದಾಸ್ ಬೆಂಗಳೂರಿನಲ್ಲಿ ಆರತಕ್ಷತೆ ಮಾಡಿಕೊಂಡಿದ್ದಾರೆ. ಇದಕ್ಕೆ ಬಹುತೇಕ ಅವರ ಬಿಗ್ ಬಾಸ್ ಸ್ನೇಹಿತರೆಲ್ಲಾ ಬಂದಿದ್ದಾರೆ. ಆದರೆ ಅವರಿಗೆ ತೀರಾ ಆತ್ಮೀಯರಾಗಿದ್ದ ಶೈನ್ ಶೆಟ್ಟಿ ಗೈರಾಗಿದ್ದರು.
ಬಿಗ್ ಬಾಸ್ ಮನೆಯಲ್ಲಿದ್ದಾಗ ಶೈನ್ ಶೆಟ್ಟಿ ಜೊತೆಗೆ ದೀಪಿಕಾ ಗೆಳೆತನವಿತ್ತು. ಅದು ಮನೆಯಿಂದ ಹೊರಬಂದ ಮೇಲೂ ಮುಂದುವರಿದಿತ್ತು. ಈ ಜೋಡಿ ನೋಡಿ ಎಷ್ಟೋ ಜನ ನಿಜ ಜೀವನದಲ್ಲಿ ನೀವೇ ಮದುವೆಯಾಗಿ ಎಂದು ಸಲಹೆ ನೀಡಿದ್ದು ಇದೆ. ಆದರೆ ಇಬ್ಬರೂ ತಾವಿಬ್ಬರೂ ಒಳ್ಳೆಯ ಸ್ನೇಹಿತರು ಎಂದೇ ಹೇಳುತ್ತಾ ಬಂದಿದ್ದರು.
ಇದೀಗ ದೀಪಿಕಾ ಗೋವಾದಲ್ಲಿ ತಾವು ಪ್ರೀತಿಸಿದ ದೀಪಕ್ ಎನ್ನುವ ಹುಡುಗನ ಜೊತೆ ಮದುವೆ ಮಾಡಿಕೊಂಡಿದ್ದು, ಬೆಂಗಳೂರಿನಲ್ಲಿ ಸ್ನೇಹಿತರಿಗಾಗಿ ಆರತಕ್ಷತೆಯನ್ನೂ ಇಟ್ಟುಕೊಂಡಿದ್ದರು. ಇದಕ್ಕೆ ಶೈನ್ ಶೆಟ್ಟಿ ಹೊರತುಪಡಿಸಿ ಬಿಗ್ ಬಾಸ್ ನ ಅವರ ಸ್ನೇಹಿತರೆಲ್ಲರೂ ಬಂದಿದ್ದರು.
ದಿವ್ಯಾ ಉರುಡುಗ, ಪ್ರಶಾಂತ್ ಸಂಬರ್ಗಿ, ಪ್ರಿಯಾಂಕ ಶಿವಣ್ಣ, ನೀತು, ಅನುಪಮಾ ಗೌಡ ಸೇರಿದಂತೆ ಬಹುತೇಕ ಬಿಗ್ ಬಾಸ್ ಸದಸ್ಯರು ಬಂದಿದ್ದರು. ಆದರೆ ಶೈನ್ ಶೆಟ್ಟಿ ಬದಲಿಗೆ ಅವರ ತಾಯಿ ಹಾಜರಾಗಿದ್ದರು. ಸ್ನೇಹಿತನಾಗಿ ಶೈನ್ ಶೆಟ್ಟಿ ಆರತಕ್ಷತೆಗೆ ಬರಲಿಲ್ಲ ಎಂದು ಅವರ ಫ್ಯಾನ್ಸ್ ಬೇಸರ ಮಾಡಿಕೊಂಡಿದ್ದು ನಿಜ.