Select Your Language

Notifications

webdunia
webdunia
webdunia
webdunia

ಪುಷ್ಪ 2 ಗೆ ಫೈಟ್ ಕೊಡಲು ಬರಲಿದ್ದಾನೆ ಶಿವರಾಜ್ ಕುಮಾರ್ ಅವರ ‘ಭೈರತಿ ರಣಗಲ್’

Bhairathi Rangal

Krishnaveni K

ಬೆಂಗಳೂರು , ಭಾನುವಾರ, 10 ಮಾರ್ಚ್ 2024 (11:01 IST)
Photo Courtesy: Twitter
ಬೆಂಗಳೂರು: ಶಿವರಾಜ್ ಕುಮಾರ್ ನಾಯಕರಾಗಿರುವ ಭೈರತಿ ರಣಗಲ್ ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ಈ ಸಿನಿಮಾ ಆಗಸ್ಟ್ 15 ರಂದು ಬಿಡುಗಡೆಯಾಗುವುದಾಗಿ ಘೋಷಣೆ ಮಾಡಲಾಗಿದೆ.

ವಿಶೇಷವೆಂದರೆ ಇದೇ ದಿನ ತೆಲುಗು ಮೂಲದ ಪ್ಯಾನ್ ಇಂಡಿಯಾ ಸಿನಿಮಾ ಪುಷ್ಪ 2 ಬಿಡುಗಡೆಯಾಗುತ್ತಿದೆ. ಇದೇ ದಿನ ಪುಷ್ಪ 2 ಗೆ ಪೈಪೋಟಿ ನೀಡಲು ಭೈರತಿ ರಣಗಲ್ ಸಿನಿಮಾ ಬಿಡುಗಡೆಯಾಗುತ್ತಿದೆ. ಮುಫ್ತಿ ಖ್ಯಾತಿಯ ನಿರ್ದೇಶಕ ನರ್ತನ್ ಈ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ಗೀತಾ ಶಿವರಾಜ್ ಕುಮಾರ್ ಅವರೇ ಚಿತ್ರ ನಿರ್ಮಾಣ ಮಾಡಿದ್ದಾರೆ.

ಮುಫ್ತಿ ಸಿನಿಮಾದಲ್ಲಿ ಶಿವಣ್ಣ ಮತ್ತು ಶ್ರೀಮುರಳಿ ನಟಿಸಿದ್ದರು. ಇದೀಗ ನಿನ್ನೆ ಬಿಡುಗಡೆ ಮಾಡಲಾದ ಚಿತ್ರದ ತುಣುಕೊಂದನ್ನು ನೋಡಿದರೆ ಈ ಸಿನಿಮಾದಲ್ಲೂ ಶಿವಣ್ಣ ಮುಫ್ತಿ ಸಿನಿಮಾದಲ್ಲಿದ್ದಂತೇ ಕಪ್ಪು ಬಟ್ಟೆ ಧರಿಸಿ ಅದೇ ಗೆಟಪ್ ನಲ್ಲಿ ಭರ್ಜರಿ ಎಂಟ್ರಿ ಕೊಡುತ್ತಾರೆ.

ಈ ತುಣುಕು ನೋಡಿದರೆ ಇದು ಮತ್ತೊಂದು ಆಕ್ಷನ್, ಮಾಸ್ ಎಂಟರ್ ಟೈನರ್ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.  ಪುಷ್ಪ 2 ಸಿನಿಮಾವನ್ನು ಚಿತ್ರತಂಡ ಕರ್ನಾಟಕದಲ್ಲಿ ದೊಡ್ಡ ಮಟ್ಟಿಗೆ ಬಿಡುಗಡೆ ಮಾಡಲು ಯೋಜನೆ ರೂಪಿಸಿತ್ತು. ಆದರೆ ಈಗ ಕರ್ನಾಟಕದಲ್ಲಿ ಭೈರತಿ ರಣಗಲ್ ಸಿನಿಮಾ ಪುಷ್ಪ 2 ಗೆ ಭರ್ಜರಿ ಪೈಪೋಟಿ ನೀಡಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪುಷ್ಪ 2 ಹಾಡಿನಲ್ಲಿ ಕುಣಿಯಲು ಕೋಟಿ ಕೊಟ್ರೂ ತಿರಸ್ಕರಿಸಿದ ಶ್ರೀಲೀಲಾ