Publish Date: Mon, 11 Mar 2024 (09:03 IST)
Updated Date: Mon, 11 Mar 2024 (09:13 IST)
ಬೆಂಗಳೂರು: ನಟಿ, ಬಿಗ್ ಬಾಸ್ ಖ್ಯಾತಿಯ ದೀಪಿಕಾ ದಾಸ್ ಮದುವೆ ರಿಸೆಪ್ಷನ್ ಬೆಂಗಳೂರಿನಲ್ಲಿ ಅದ್ಧೂರಿಯಾಗಿ ನಡೆದಿದ್ದು, ಸಿನಿ ಸ್ನೇಹಿತರು, ಮಾಧ್ಯಮಗಳನ್ನು ಆಹ್ವಾನಿಸಿದ್ದರು.
ಇಬ್ಬರೂ ಕಳೆದ ವಾರ ಗೋವಾದಲ್ಲಿ ಮದುವೆಯಾಗಿದ್ದು ದಿಡೀರ್ ಆಗಿ ಫೋಟೋ ಪ್ರಕಟಿಸಿ ಎಲ್ಲರಿಗೂ ಸರ್ಪೈಸ್ ನೀಡಿದ್ದರು. ಈ ವೇಳೆ ದೀಪಿಕಾ ಗುಟ್ಟಾಗಿ ಮದುವೆ ಆದರು ಎಂದು ಎಲ್ಲಾ ಕಡೆ ಸುದ್ದಿಯಾಗಿತ್ತು. ಆದರೆ ರಿಸೆಪ್ಷನ್ ಸಂದರ್ಭದಲ್ಲಿ ಮಾಧ‍್ಯಮಗಳ ಮುಂದೆ ದೀಪಿಕಾ ತಮ್ಮಿಬ್ಬರ ಪ್ರೀತಿ, ಮದುವೆ ವಿಚಾರದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.
ನಾವು ಗುಟ್ಟಾಗಿ ಮದುವೆಯಾಗಿದ್ದಲ್ಲ. ನನಗೆ ಡೆಸ್ಟಿನೇಷನ್ ಮದುವೆಯಾಗಬೇಕೆಂದು ಆಸೆಯಿತ್ತು. ಅದಕ್ಕೇ ಗೋವಾದಲ್ಲಿ ಮದುವೆಯಾಗಲು ಪ್ಲ್ಯಾನ್ ಮಾಡಿದ್ದೆವು. ಆದರೆ ಇದು ಕಷ್ಟ ಎಂದು ಗೊತ್ತಿದ್ದರೂ ದೀಪಕ್ ನನಗೋಸ್ಕರ ಕಷ್ಟಪಟ್ಟರು. ನಾವಿಬ್ಬರೂ ಕಳೆದ ನಾಲ್ಕು ವರ್ಷಗಳಿಂದ ಪರಿಚಿತರು. ಆದರೆ ಕಳೆದ ಒಂದು ವರ್ಷದಿಂದ ರಿಲೇಷನ್ ಶಿಪ್ ನಲ್ಲಿದ್ದೆವು ಅಷ್ಟೇ. ನಾನು ಅಂದುಕೊಂಡ ರೀತಿಯ ಹುಡುಗನೇ ನನಗೆ ಸಿಕ್ಕಿದ್ದಾರೆ. ನಾನೇ ಕಮ್ಮಿ ಮಾತನಾಡುತ್ತೇನೆ. ದೀಪಕ್ ನನಗಿಂತ ಕಡಿಮೆ ಮಾತನಾಡುತ್ತಾರೆ. ನನ್ನ ಹುಡುಗ ಪಕ್ಕಾ ಕನ್ನಡಿಗ ಎಂದಿದ್ದಾರೆ.
ಬಳಿಕ ದೀಪಕ್ ಮಾತನಾಡಿದ್ದು, ನಾನು ದುಬೈನವನಲ್ಲ. ಇಲ್ಲೇ ಆರ್ ಆರ್ ನಗರದ ನಿವಾಸಿ. ಇಲ್ಲಿ ರಿಯಲ್ ಎಸ್ಟೇಟ್ ಉದ್ಯಮವಿದೆ. ದುಬೈನಲ್ಲಿ ಒಂದು ಐಟಿ ಕಂಪನಿಯಿದೆ. ಇಷ್ಟು ದಿನದಂತೆ ಮುಂದೆಯೂ ದೀಪಿಕಾಗೆ ಸಪೋರ್ಟ್ ಮಾಡಿ ಎಂದು ಕೇಳಿಕೊಂಡರು.