Select Your Language

Notifications

webdunia
webdunia
webdunia
webdunia

ಕಾಂತಾರ ಚಾಪ್ಟರ್ 1 ರಲ್ಲಿ ರಿಷಬ್ ಶೆಟ್ಟಿ ಜೊತೆ ಜ್ಯೂ ಎನ್ ಟಿಆರ್

Rishab Shetty-Jr NTR-Prashanth Neel
ಬೆಂಗಳೂರು: ಕಾಂತಾರ ಚಾಪ್ಟರ್ 1 ರಲ್ಲಿ ರಿಷಬ್ ಶೆಟ್ಟಿ ಜೊತೆಗೆ ಟಾಲಿವುಡ್ ಸ್ಟಾರ್ ಜ್ಯೂ ಎನ್ ಟಿಆರ್ ಕೂಡಾ ನಟಿಸಲಿದ್ದಾರೆ ಎಂಬ ಸುದ್ದಿ ಬಲವಾಗಿ ಕೇಳಿಬರುತ್ತಿದೆ. ಇದು ಅಭಿಮಾನಿಗಳಿಗೆ ಧಮಾಕಾ ಸುದ್ದಿಯಾಗಿದೆ.

ಇತ್ತೀಚೆಗೆ ಪ್ರಶಾಂತ್ ನೀಲ್ ಮನೆಯ ಪಾರ್ಟಿಯಲ್ಲಿ ರಿಷಬ್ ಶೆಟ್ಟಿ ಜೊತೆಗೆ ಜ್ಯೂ ಎನ್ ಟಿಆರ್ ಕಾಣಿಸಿಕೊಂಡಿದ್ದರು. ಇಬ್ಬರೂ ಜೊತೆಯಾಗಿ ಫೋಟೋಗೆ ಪೋಸ್ ನೀಡಿದ್ದು ನೋಡಿ ಅಭಿಮಾನಿಗಳು ಜ್ಯೂ ಎನ್ ಟಿಆರ್ ಮುಂದಿನ ಸಿನಿಮಾದಲ್ಲಿ ರಿಷಬ್ ಇರಲಿದ್ದಾರಾ ಎಂದು ಅನುಮಾನಿಸಿದ್ದರು.

ಆದರೆ ಈಗ ರಿಷಬ್ ಕಾಂತಾರ ಚಾಪ್ಟರ್ 1 ರಲ್ಲಿ ಜ್ಯೂ ಎನ್ ಟಿಆರ್ ವಿಭಿನ್ನ ಪಾತ್ರ ಮಾಡಲಿದ್ದಾರೆ ಎಂಬ ಸುದ್ದಿ ಕೇಳಿಬಂದಿದೆ. ಈ ಬಗ್ಗೆ ಸದ್ಯದಲ್ಲೇ ಅಧಿಕೃತ ಪ್ರಕಟಣೆ ಹೊರಬೀಳುವ ಸಾಧ್ಯತೆಯಿದೆ. ಈ ಮೊದಲು ಕಾಂತಾರ ಸಿನಿಮಾವನ್ನು ವೀಕ್ಷಿಸಿ ಜ್ಯೂ ಎನ್ ಟಿಆರ್ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇದೀಗ ಎರಡನೇ ಸಿನಿಮಾದಲ್ಲಿ ಅವರೇ ಪಾತ್ರ ಮಾಡುವ ಸುದ್ದಿ ಬಂದಿದೆ.

ಜ್ಯೂ ಎನ್ ಟಿಆರ್ ತಾಯಿಯ ಊರೂ ರಿಷಬ್ ಶೆಟ್ಟಿ ತವರು ಕುಂದಾಪುರವೇ. ಇಬ್ಬರೂ ನಟರ ಮಧ್ಯೆ ಈ ಕನೆಕ್ಷನ್ ಇದೆ. ಇದೇ ಕಾರಣಕ್ಕೆ ಎಲ್ಲೇ ಕಂಡರೂ ಇಬ್ಬರೂ ಸ್ಟಾರ್ ಗಳೂ ಆತ್ಮೀಯವಾಗಿಯೇ ಕುಶಲೋಪರಿ ನಡೆಸುತ್ತಾರೆ. ಅದೇ ಸ್ನೇಹದಿಂದ ಜ್ಯೂ ಎನ್ ಟಿಆರ್ ಕಾಂತಾರ ಸಿನಿಮಾದ ಭಾಗವಾಗುತ್ತಿದ್ದಾರೆ ಎಂಬ ಸುದ್ದಿಯಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಂಗಾರಪ್ಪ ಮನೆ ಒಂದು ಮಾಡಲು ನಾನು ಅವರ ಮನೆ ಮಗ ಅಲ್ಲ: ಶಿವರಾಜ್ ಕುಮಾರ್