Publish Date: Wed, 13 Mar 2024 (10:39 IST)
Updated Date: Wed, 13 Mar 2024 (10:52 IST)
ಬೆಂಗಳೂರು: ಐಪಿಎಲ್ 2024 ಆರಂಭಕ್ಕೆ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅಭಿಮಾನಿಗಳಿಗೆ ಸರ್ಪೈಸ್ ಕೊಟ್ಟಿದೆ. ತಂಡಕ್ಕೆ ಹೊಸ ಹೆಸರು ನೀಡುವ ಸುಳಿವು ಕೊಟ್ಟಿದೆ.
ರಿಷಬ್ ಶೆಟ್ಟಿ ಕಾಂತಾರ ಗೆಟಪ್ ನಲ್ಲಿ ಬಂದು ರಾಯಲ್ ಚಾಲೆಂಜರ್ ಬ್ಯಾಂಗಲೂರು ಎಂದು ಮೈಮೇಲೆ ಬರೆದುಕೊಂಡಿರುವ ಕೋಣಗಳನ್ನು ಪರಿಶೀಲನೆ ಮಾಡುತ್ತಾರೆ. ಬಳಿಕ ಬ್ಯಾಂಗಲೂರು ಎಂದು ಬರೆದಿರುವ ಕೋಣನನ್ನು ಇದು ಬೇಡ..ಭಟ್ರೇ ತಗೊಂಡು ಹೋಗಿ ಇದನ್ನು ಎಂದು ಹೇಳುತ್ತಾರೆ. ಬಳಿಕ ಬ್ಯಾಂಗಲೂರು ಎಂದು ಬರೆದಿರುವ ಕೋಣನನ್ನು ಓಡಿಸಲಾಗುತ್ತದೆ. ಈಗ ರಿಷಬ್ ಅರ್ಥ ಆಯ್ತಾ ಎಂದು ಫ್ಯಾನ್ಸ್ ಗೆ ಕೇಳುತ್ತಾರೆ.
ಆರ್ ಸಿಬಿಯ ಈ ವಿಡಿಯೋ ನೋಡಿ ಆರ್ ಸಿಬಿಯ ಮುಂದಿರುವ ಬ್ಯಾಂಗಲೂರ್ ಎನ್ನುವ ಹೆಸರು ಬದಲು ಬೆಂಗಳೂರು ಎಂದು ಬದಲಾಗಲಿದೆ. ಈ ಮೂಲಕ ಫ್ಯಾನ್ಸ್ ಗಳ ಹಲವು ವರ್ಷಗಳ ಬೇಡಿಕೆ ಈಡೇರುತ್ತಿದೆ ಎಂದು ಖುಷಿಪಟ್ಟಿದ್ದಾರೆ. ಈ ಮೂಲಕ ಇನ್ನು ಆರ್ ಸಿಬಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಎಂದೇ ಅಧಿಕೃತವಾಗಿ ಕರೆಯಿಸಿಕೊಳ್ಳಲಿದೆ.