Select Your Language

Notifications

webdunia
webdunia
webdunia
webdunia

ಖ್ಯಾತ ಫೈಟ್ ಮಾಸ್ಟರ್ ರವಿ ವರ್ಮ ವಿರುದ್ಧ ಕೊಲೆ ಬೆದರಿಕೆ ಆರೋಪ: ದೂರು ದಾಖಲು

Ravi Varma

Krishnaveni K

ಬೆಂಗಳೂರು , ಬುಧವಾರ, 13 ಮಾರ್ಚ್ 2024 (14:03 IST)
Photo Courtesy: Twitter
ಬೆಂಗಳೂರು: ಬಹುಭಾಷೆಗಳಲ್ಲಿ ಜನಪ್ರಿಯರಾಗಿರುವ ಕನ್ನಡದ ಖ್ಯಾತ ಸಾಹಸ ನಿರ್ದೇಶಕ ರವಿ ವರ್ಮ ವಿರುದ್ಧ ಕೊಲೆ ಬೆದರಿಕೆ ಆರೋಪದಲ್ಲಿ ದೂರು ದಾಖಲಾಗಿದೆ. ಮತ್ತೊಬ್ಬ ಖ್ಯಾತ ಫೈಟ್ ಮಾಸ್ಟರ್ ಡ್ಯಾನಿ ಮಾಸ್ಟರ್ ದೂರು ದಾಖಲಿಸಿದ್ದಾರೆ.

ಈ ಸಂಬಂಧ ಫಿಲಂ ಚೇಂಬರ್ ಮತ್ತು ಜ್ಞಾನ ಭಾರತಿ ಪೊಲೀಸ್ ಠಾಣೆಗೆ ಡ್ಯಾನಿ ಮಾಸ್ಟರ್ ದೂರು ನೀಡಿದ್ದಾರೆ. ಈ ಹಿಂದೆಯೇ ಇವರಿಬ್ಬರ ನಡುವೆ ವೈಮನಸ್ಯವಿತ್ತು. ಅದೀಗ ಸ್ಪೋಟಗೊಂಡಿದೆ. ನಾನು ಮಾಡಿದ್ದ ಸಾಹಸ ದೃಶ್ಯವನ್ನು ತಾನು ಮಾಡಿದ್ದು ಎಂದು ರವಿವರ್ಮ ಕ್ರೆಡಿಟ್ ತೆಗೆದುಕೊಳ್ಳುತ್ತಿದ್ದಾರೆ ಎಂದು ಡ್ಯಾನಿ ಮಾಸ್ಟರ್ ಆರೋಪಿಸಿದ್ದಾರೆ. ಇದೀಗ ರವಿ ವರ್ಮ ವಿರುದ್ಧ ಕೊಲೆ ಬೆದರಿಕೆ ಆರೋಪ ಮಾಡಿದ್ದಾರೆ.

ಜಾಕಿ ಸಿನಿಮಾದ ಸಾಹಸ ದೃಶ್ಯವೊಂದನ್ನು ನೋಡಿ ಪ್ರಭುದೇವ ಅದನ್ನು ರವಿ ವರ್ಮ ಮಾಡಿದ್ದು ಎಂದು ತಪ್ಪಾಗಿ ತಿಳಿದು ಅವರನ್ನು ಕರೆಸಿ ಬಾಲಿವುಡ್ ನಲ್ಲಿ ಅವಕಾಶ ಕೊಟ್ಟಿದ್ದರು. ಆದರೆ ಆ ಫೈಟ್ ಕಂಪೋಸ್ ಮಾಡಿದ್ದು ನಾನು. ನನಗೆ ಬರಬೇಕಾದ ಅವಕಾಶವನ್ನು ರವಿ ವರ್ಮ ತೆಗೆದುಕೊಂಡರು ಎಂದು ಡ್ಯಾನಿ ಮಾಸ್ಟರ್ ಆರೋಪಿಸಿದ್ದರು.  ನನ್ನ ಕೆಲಸ ತೋರಿಸಿ ರವಿ ವರ್ಮ ಚಾನ್ಸ್ ತೆಗೆದುಕೊಂಡಿದ್ದಾರೆ ಎಂದು ಡ್ಯಾನಿ ಮಾಸ್ಟರ್ ಆರೋಪ. ಇದೇ ಕಾರಣಕ್ಕೆ ಇಬ್ಬರ ನಡುವೆ ಜಗಳ ನಡೆದಿದೆ ಎನ್ನಲಾಗಿದೆ.

ರವಿ ವರ್ಮ ನನ್ನ ಸಹಾಯಕನಿಗೆ ಕರೆ ಮಾಡಿ ನನ್ನ ಬಗ್ಗೆ ಬೈದಿದ್ದಾರೆ. ಅಲ್ಲದೆ, ಮಾಸ್ತಿಗುಡಿ ದುರಂತದ ಸಂದರ್ಭದಲ್ಲಿ ನನ್ನ ಬಗ್ಗೆ ಇಲ್ಲಸಲ್ಲದ ಮಾತನಾಡಿದಾಗಲೇ ನಾನು ಸಾಯಿಸಿಬಿಡಬೇಕಿತ್ತು. ಆದರೆ ನನ್ನ ಅಕ್ಕ ತಡೆದರು ಎಂದಿದ್ದಾರೆ ಎಂದು ಡ್ಯಾನಿ ಮಾಸ್ಟರ್ ದೂರಿನಲ್ಲಿ ತಿಳಿಸಿದ್ದಾರೆ.

 

Share this Story:

Follow Webdunia kannada

ಮುಂದಿನ ಸುದ್ದಿ

ಕಾಂತಾರ ಚಾಪ್ಟರ್ 1 ರಲ್ಲಿ ರಿಷಬ್ ಶೆಟ್ಟಿ ಜೊತೆ ಜ್ಯೂ ಎನ್ ಟಿಆರ್