Select Your Language

Notifications

webdunia
webdunia
webdunia
webdunia

ಸಾರ್ವಜನಿಕರಲ್ಲಿ ವಿನಂತಿ: ಮೊದಲ ಹೆಜ್ಜೆಯಲ್ಲೇ ಗೆಲುವಿನ ಸದ್ದು!

ಸಾರ್ವಜನಿಕರಲ್ಲಿ ವಿನಂತಿ: ಮೊದಲ ಹೆಜ್ಜೆಯಲ್ಲೇ ಗೆಲುವಿನ ಸದ್ದು!
ಬೆಂಗಳೂರು , ಶುಕ್ರವಾರ, 21 ಜೂನ್ 2019 (15:07 IST)
ಕನ್ನಡ ಚಿತ್ರರಂಗದಲ್ಲೀಗ ಹೊಸಾ ಆಲೋಚನೆ, ಹೊಸಾ ಬಗೆಯ ಚಿತ್ರಗಳ ಪರ್ವ ಕಾಲವೊಂದು ಚಾಲ್ತಿಯಲ್ಲಿದೆ. ಇಂಥಾ ಚಿತ್ರಗಳ ಮುನ್ಸೂಚನೆ ಸಿಗೋದೇ ಟೈಟಲ್ಗಳಿಂದ. ಆನರನ್ನು ಆಲೋಚನೆಗೆ ಹಚ್ಚುತ್ತಲೇ ಕಥೆಯ ಬಗ್ಗೆ ಕುತೂಹಲ ಕೆರಳಿಸುವಂಥಾ ಶೀರ್ಷಿಕೆಗಳು ಆಗಾಗ ಅನಾವರಣಗೊಳ್ಳುತ್ತವಲ್ಲಾ? ಆ ಸಾಲಿನಲ್ಲಿ ಇತ್ತೀಚಿನ ಸೇರ್ಪಟೆ `ಸಾರ್ವಜನಿಕರಲ್ಲಿ ವಿನಂತಿ’ ಎಂಬ ಚಿತ್ರ.
ಈ ವಾರ ಅಂದರೆ 21ನೇ ತಾರೀಕಿನಂದು ಸಾರ್ವಜನಿಕರಲ್ಲಿ ವಿನಂತಿ ತೆರೆಗಾಣಲಿದೆ. ಈ ಚಿತ್ರವನ್ನು ಉಮಾ ನಂಜುಂಡರಾವ್ ನಿರ್ಮಾಣ ಮಾಡಿದ್ದಾರೆ. ಇದು ಕೃಪಾ ಸಾಗರ್ ಅವರ ಪಾಲಿಗೆ ನಿರ್ದೇಶಕರಾಗಿ ಮೊದಲ ಹೆಜ್ಜೆ. ಯಾವ ಸದ್ದು ಗದ್ದಲವೂ ಇಲ್ಲದೇ ತಣ್ಣಗೆ ಚಿತ್ರೀಕರಣ ಮುಗಿಸಿಕೊಂಡಿದ್ದ ಕೃಪಾ ಸಾಗರ್ ಟೀಸರ್ ಮೂಲಕವೇ ಸಂಚಲನ ಸೃಷ್ಟಿಸಿದ್ದಾರೆ. ಅದು ಮೊನ್ನೆ ಲಾಂಚ್ ಆಗಿದ್ದ ಟ್ರೈಲರ್ ಮೂಲಕ ಮತ್ತಷ್ಟು ತೀವ್ರವಾಗಿದೆ. ಈ ಮೂಲಕವೇ ಅವರ ಮೊದಲ ಹೆಜ್ಜೆಯಲ್ಲಿಯೇ ಗೆಲುವಿನ ಸದ್ದು ಸ್ಪಷ್ಟವಾಗಿಯೇ ಕೇಳಿಸಿದೆ!
webdunia
ಹಾಗಂತ ಕೃಪಾ ಸಾಗರ್ ಅವರೇನು ಏಕಾಏಕಿ ನಿರ್ದೇಶಕರಾಗಿ ಉದ್ಭವವಾದವರಲ್ಲ. ಅವರೀಗಲೇ ಹಲವಾರು ಘಟ್ಟಗಳನ್ನು ದಾಟಿಕೊಂಡು ಬಂದಿದ್ದಾರೆ. ಹತ್ತಾರು ನಿರಾಸೆಗಳಿಗೆ ಎದೆಯೊಡ್ಡುತ್ತಲೇ ಈ ಮೂಲಕ ತಮ್ಮ ನಿಜವಾದ ಪ್ರತಿಭೆಯನ್ನು ಒರೆಗೆ ಹಚ್ಚಿ ನೋಡಲು ಮುಂದಾಗಿದ್ದಾರೆ. ಅದೇ ಶ್ರದ್ಧೆಯಿಂದಲೇ ಇಡೀ ಚಿತ್ರವನ್ನು ರೂಪಿಸಿದ್ದಾರೆ. ಅಂಥಾ ಶ್ರದ್ಧೆಯಿಲ್ಲದೇ ಹೋಗಿದ್ದರೆ ಈ ಥರದ ಟಾಕ್ ಕ್ರಿಯೇಟ್ ಮಾಡೋದು ಖಂಡಿತಾ ಸಾಧ್ಯವಿರುತ್ತಿರಲಿಲ್ಲ.
webdunia
ಸಾರ್ವಜನಿಕರಲ್ಲಿ ವಿನಂತಿ ಎಂಬ ಹೆಸರು ಕೇಳಿದಾಕ್ಷಣ ಇದು ಯಾವ ಜಾನರಿನ ಚಿತ್ರವೆಂಬ ಗೊಂದಲ ಕಾಡುತ್ತೆ. ಆದರೆ ಈಗ ಹೊರ ಬಿದ್ದಿರೋ ಟ್ರೈಲರ್ ಮತ್ತು ಟೀಸರ್ಗಳು ಯಾವ ಸಂಶಯವೂ ಇಲ್ಲದೆ ಇದೊಂದು ಪಕ್ಕಾ ಕಮರ್ಶಿಯಲ್ ಮೂವಿ ಎಂಬ ವಿಚಾರವನ್ನು ಸಾಬೀತು ಮಾಡಿದೆ. ಇಲ್ಲಿ ಯಾವುದೂ ಸಿದ್ಧಸೂತ್ರಕ್ಕೆ ಕಟ್ಟು ಬಿದ್ದಿಲ್ಲ. ಪ್ರಯೋಗಾತ್ಮಕ ಅಂಶಗಳೇ ಇದ್ದರೂ ಅದೆಲ್ಲವನ್ನೂ ಕಮರ್ಶಿಯಲ್ ಚೌಕಟ್ಟಿನಲ್ಲಿಯೇ ಪ್ರಯೋಗಿಸಲಾಗಿದೆಯಂತೆ. ಒಟ್ಟಾರೆಯಾಗಿ ಈ ಚಿತ್ರ ಎಲ್ಲ ವರ್ಗದ ಪ್ರೇಕ್ಷಕರಿಗೂ ಆಪ್ತವಾಗುವಂತೆ ಮೂಡಿ ಬಂದಿದೆಯಂತೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಾರ್ವಜನಿಕರಲ್ಲಿ ವಿನಂತಿ ಮಾಡಿಕೊಂಡ ಮೈಸೂರಿನ ಮಲ್ಲಿಗೆ!