Webdunia - Bharat's app for daily news and videos

Install App

ಗೋಲ್ಡನ್ `ಗೀತಾ’ಗೆ ಸಂತೋಷ್ ಆನಂದ್ರಾಮ್ ಬೆಂಬಲ!

Webdunia
ಮಂಗಳವಾರ, 24 ಸೆಪ್ಟಂಬರ್ 2019 (13:58 IST)
ಮಿಸ್ಟರ್ ಆಂಡ್ ಮಿಸಸ್ ರಾಮಾಚಾರಿ, ರಾಜಕುಮಾರದಂಥಾ ಸೂಪರ್ ಹಿಟ್ ಚಿತ್ರಗಳನ್ನು ಕೊಟ್ಟ ಪ್ರತಿಭಾನ್ವಿತ ನಿರ್ದೇಶಕ ಸಂತೋಷ್ ಆನಂದ್ರಾಮ್. ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದ ಈ ಚಿತ್ರದ ಹಾಡೊಂದನ್ನು ಸಂತೋಷ್ ಬರೆದಿದ್ದರು. ಅದನ್ನು ಖುದ್ದಾಗಿ ಅವರೇ ಮುಂದೆ ನಿಂತು ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರಿಂದ ಹಾಡಿಸಿದ್ದರು. ಬರೀ ಇಷ್ಟು ಮಾತ್ರವಲ್ಲದೇ ಗೀತಾ ಚಿತ್ರ ಶುರುವಾದಂದಿನಿಂದ ಇಂದಿನವರೆಗೂ ಸಂತೋಶ್ ಆನಂದ್ರಾಮ್ ಬೆಂಬಲವಾಗಿ ನಿಂತಿದ್ದಾರೆ. ಅವರು ಬಿಡುವಿಲ್ಲದ ಕೆಲಸ ಕಾರ್ಯಗಳ ನಡುವೆಯೂ ಇಷ್ಟೆಲ್ಲವನ್ನು ಮಾಡುತ್ತಿರೋದು ಸ್ನೇಹಕ್ಕಾಗಿ!
ಈ ಚಿತ್ರದ ನಿರ್ದೇಶಕ ವಿಜಯ್ ನಾಗೇಂದ್ರ ಮತ್ತು ಸಂತೋಷ್ ಆನಂದ್ ರಾಮ್ ಕಾಲೇಜು ದಿನಗಳಿಂದಲೂ ಗೆಳೆಯರು. ಇಬ್ಬರೂ ಕೂಡಾ ಒಟ್ಟೊಟ್ಟಾಗಿಯೇ ಸಿನಿಮಾ ಕನಸು ಕಂಡವರು. ಆರಂಭ ಕಾಲದಲ್ಲಿ ಸಿನಿಮಾ ರಂಗ ಪ್ರವೇಶಿಸಲು ಇವರಿಬ್ಬರೂ ಕೂಡಾ ನಾನಾ ಪಡಿಪಾಟಲು ಪಟ್ಟಿದ್ದಾರೆ. ಆದರೆ ಅದರಲ್ಲಿ ಮೊದಲು ಯಶ ಕಂಡಿದ್ದ ಸಂತೋಷ್ ಆನಂದ್ರಾಮ್. ಮಿಸ್ಟರ್ ಆಂಡ್ ಮಿಸಸ್ ರಾಮಾಚಾರಿ ಮೂಲಕ ಸ್ವತಂತ್ರ ನಿರ್ದೇಶಕರಾದ ಸಂತೋಷ್ ಗೆಳೆಯ ವಿಜಯ್ ನಾಗೇಂದ್ರರನ್ನೂ ನಿರ್ದೇಶನ ವಿಭಾಗಕ್ಕೆ ಸೇರಿಸಿಕೊಂಡಿದ್ದರು. ನಂತರ ರಾಜಕುಮಾರದಲ್ಲಿಯೂ ಈ ಜುಗಲ್ಬಂದಿ ಮುಂದುವರೆದಿತ್ತು.
 
ರಾಜಕುಮಾರ ಚಿತ್ರದ ಸಂದರ್ಭದಲ್ಲಿಯೇ ಒಂದಷ್ಟು ಅನುಭವಗಳನ್ನು ತುಂಬಿಕೊಂಡಿದ್ದ ವಿಜಯ್ ನಾಗೇಂದ್ರ ಸ್ವತಂತ್ರ ನಿರ್ದೇಶಕರಾಗಲು ಮನಸು ಮಾಡಿದ್ದರು. ಹಾಗೆ ತಯಾರಾಗಲಾರಂಭಿಸಿದ್ದ ಅವರಿಗೆ ತುಂಬು ಬೆಂಬಲ ನೀಡಿದವರು ಸಂತೋಷ್ ಆನಂದ್ರಾಮ್. ಆ ನಂತರದಲ್ಲಿ ಡೈಲಾಗ್ ವಿಚಾರದಲ್ಲಿಯೂ ಸಂತೋಷ್ ಸಹಾಯ ಮಾಡಿದ್ದರು. ಬಳಿಕ ಪ್ರತೀ ಹಂತದಲ್ಲಿಯೂ ಗೆಳೆಯನ ಮೊದಲ ಹೆಜ್ಜೆಗೆ ಜೊತೆಯಾಗಿದ್ದರು. ಕಡೆಗೆ ಕನ್ನಡತನದ ಒಂದು ಹಾಡನ್ನೂ ಬರೆದು ವಿಜಯ್ ನಾಗೇಂದ್ರರಿಗೆ ಸಾಥ್ ನೀಡಿದ್ದರು. ಹೀಗೆ ಗೆಳೆಯನ ಮೊದಲ ಚಿತ್ರ ಗೀತಾಗೆ ಸಂತೋಷ್ ಆನಂದ್ ರಾಮ್ ಸದಾ ಬೆಂಬಲವಾಗಿ ನಿಂತಿದ್ದಾರೆ. ಕನ್ನಡದ ಖ್ಯಾತ ನಿರ್ಮಾಪಕ ಸೈಯದ್ ಸಲಾಮ್ ಮತ್ತು ಶಿಲ್ಪಾ ಗಣೇಶ್ ನಿರ್ಮಾಪಕರಾಗಿ ನಿರ್ದೇಶಕರ ಕನಸು ಮತ್ತಷ್ಟು ಹೊಳಪು ಪಡೆಯುವಂತೆ ಮಾಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಹೆಣ್ಣು ಮಗುವಾಗುತ್ತಿದ್ದ ಹಾಗೇ ಆಥಿಯಾಗೆ ಬಿಗ್ ಸರ್ಪ್ರೈಸ್ ಕೊಟ್ಟ ಕೆಎಲ್ ರಾಹುಲ್‌, ಸುನೀಲ್ ಶೆಟ್ಟಿ

Machete Reels Case: ರಜತ್‌ಗೆ 14 ದಿನಗಳ ನ್ಯಾಯಾಂಗ ಬಂಧನ

ತನ್ನ ಬ್ಯೂಟಿಯನ್ನು ಕೆದಕಿದವನಿಗೆ ಚಳಿ ಬಿಡಿಸಿದ ನಟಿ ಖುಷ್ಭೂ

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಮುಂದಿನ ಸುದ್ದಿ
Show comments