Select Your Language

Notifications

webdunia
webdunia
webdunia
webdunia

ಡಾ.ರಾಜ್ ಮೊಮ್ಮಗನ ಚಿತ್ರರಂಗಕ್ಕೆ ಸ್ವಾಗತಿಸಿದ ಸ್ಟಾರ್ಸ್

ಯುವರಾಜ್ ಕುಮಾರ್
ಬೆಂಗಳೂರು , ಬುಧವಾರ, 27 ಏಪ್ರಿಲ್ 2022 (17:16 IST)
ಬೆಂಗಳೂರು: ಡಾ.ರಾಜ್ ಕುಟುಂಬದ ಮತ್ತೊಬ್ಬ ಕುಡಿ ಯುವರಾಜ್ ಕುಮಾರ್ ಚಿತ್ರರಂಗ ಪ್ರವೇಶಕ್ಕೆ ವೇದಿಕೆ ಸಿದ್ಧವಾಗಿದೆ. ಹೊಂಬಾಳೆ ಫಿಲಂಸ್ ಯುವರಾಜ್ ರನ್ನು ಚಿತ್ರರಂಗಕ್ಕೆ ಪರಿಚಯಿಸಲಿದೆ.

ಸಂತೋಷ್ ಆನಂದ್ ರಾಮ್ ನಿರ್ದೇಶನದಲ್ಲಿ ಯುವರಾಜ್ ಸಿನಿಮಾ ಘೋಷಣೆಯಾಗುತ್ತಿದ್ದಂತೇ ಸ್ಯಾಂಡಲ್ ವುಡ್ ಕಲಾವಿದರು ಅವರನ್ನು ಸ್ವಾಗತಿಸಿದ್ದಾರೆ.

ನವರಸನಾಯಕ ಜಗ್ಗೇಶ್, ರಿಷಬ್ ಶೆಟ್ಟಿ, ಶ್ರೀಮುರಳಿ, ರವಿಶಂಕರ್ ಗೌಡ, ನಿರ್ದೇಶಕ ಚೇತನ್ ಕುಮಾರ್, ಕೃಷ್ಣ ಸೇರಿದಂತೆ ಅನೇಕರು ಸಾಮಾಜಿಕ ಜಾಲತಾಣದ ಮೂಲಕ ಯುವರಾಜ್ ಗೆ ಸ್ವಾಗತ ಕೋರಿದ್ದಾರೆ. ಇನ್ನು, ಅಭಿಮಾನಿಗಳು ಯುವರಾಜ್ ಕಟೌಟ್ ಗೆ ಪೂಜೆ ಮಾಡಿ ಅದ್ಧೂರಿಯಾಗಿ ರಾಜವಂಶದ ಕುಡಿಯನ್ನು ಚಿತ್ರರಂಗಕ್ಕೆ ಬರಮಾಡಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

900 ಕೋಟಿ ದಾಟಿದ ಕೆಜಿಎಫ್ 2 ಗಳಿಕೆ