Select Your Language

Notifications

webdunia
webdunia
webdunia
webdunia

ರಾಕಿಂಗ್ ಸ್ಟಾರ್ ಯಶ್ ಮುಂದಿರುವ ಎರಡು ಸಿನಿಮಾಗಳು ಇವುಗಳು

ರಾಕಿಂಗ್ ಸ್ಟಾರ್ ಯಶ್ ಮುಂದಿರುವ ಎರಡು ಸಿನಿಮಾಗಳು ಇವುಗಳು
ಬೆಂಗಳೂರು , ಬುಧವಾರ, 27 ಏಪ್ರಿಲ್ 2022 (11:06 IST)
ಬೆಂಗಳೂರು: ಕೆಜಿಎಫ್ 2 ಬಳಿಕ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಸಿನಿಮಾ ಯಾವುದು ಎಂಬ ಕುತೂಹಲ ಅಭಿಮಾನಿಗಳಲ್ಲಿದೆ. ಈ ಬಗ್ಗೆ ಇದುವರೆಗೆ ಯಶ್ ಕಡೆಯಿಂದ ಅಧಿಕೃತ ಪ್ರಕಟಣೆ ಬಂದಿಲ್ಲ.

ಯಶ್ 19 ನೇ ಸಿನಿಮಾ ಮುಫ್ತಿ ಖ್ಯಾತಿ ನಿರ್ದೇಶಕ ನರ್ತನ್ ಜೊತೆಗೆ ಎಂದು ಈಗಾಗಲೇ ಸುಳಿವು ಸಿಕ್ಕಿದೆ. ಇದೂ ಕೂಡಾ ಆಕ್ಷನ್ ಥ್ರಿಲ್ಲರ್ ಆಗಿರಲಿದೆ ಎನ್ನಲಾಗಿದೆ. ಇದಿನ್ನೂ ಸ್ಕ್ರಿಪ್ಟ್ ಹಂತದಲ್ಲೇ ಇದೆ.

ಇದಾದ ಬಳಿಕ ಯಶ್ ಕೆಜಿಎಫ್ ಮೂರನೇ ಭಾಗದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿಯಿದೆ. ಅಷ್ಟರ ವೇಳೆಗೆ ಪ್ರಶಾಂತ್ ನೀಲ್ ಕೂಡಾ ಈಗಾಗಲೇ ಕಮಿಟ್ ಆಗಿರುವ ಎರಡು ಸಿನಿಮಾಗಳನ್ನು ಮುಗಿಸಲಿದ್ದಾರೆ. ಅದಾದ ಬಳಿಕ ಮತ್ತೆ ಕೆಜಿಎಫ್ 3 ಸಿನಿಮಾ ಆರಂಭವಾಗಲಿದೆ ಎಂಬ ಸುದ್ದಿಯಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಗೋವಾ ತೀರದಲ್ಲಿ ಯಶ್-ರಾಧಿಕಾ ಸಿಹಿ ಮುತ್ತು