ಮುಂಬೈ: ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿದ ಕೆಜಿಎಫ್ 2 ಸಿನಿಮಾದ ವಯಲೆನ್ಸ್ ಡೈಲಾಗ್ ಈಗ ಎಲ್ಲರ ಬಾಯಲ್ಲೂ ಹರಿದಾಡುತ್ತಿದೆ.
ಕೆಜಿಎಫ್ 2 ಸಿನಿಮಾದಲ್ಲಿ ರಾಕಿ ಭಾಯಿ ಯಶ್ ಹೇಳುವ ವಯಲೆನ್ಸ್ ವಯಲೆನ್ಸ್ ಐ ಡೋಂಟ್ ಲೈಕ್ ಇಟ್ ಡೈಲಾಗ್ ಎಲ್ಲರಿಗೂ ಇಷ್ಟವಾಗಿತ್ತು.
ಇದೀಗ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಕ್ಯಾಮರಾಗಳ ಮುಂದೆ ಇದೇ ಡೈಲಾಗ್ ಹೇಳಿರುವ ವಿಡಿಯೋ ವೈರಲ್ ಆಗಿದೆ. ಕೆಜಿಎಫ್ 2 ಸಿನಿಮಾ ಬಾಲಿವುಡ್ ನಲ್ಲೂ ಮೋಡಿ ಮಾಡಿದೆ ಎನ್ನುವುದಕ್ಕೆ ಇದೇ ಸಾಕ್ಷಿ.