Publish Date: Mon, 25 Apr 2022 (09:00 IST)
Updated Date: Mon, 25 Apr 2022 (09:01 IST)
ಮುಂಬೈ: ಕೆಜಿಎಫ್ 2 ಬಿಡುಗಡೆಯಾಗಿ ಒಂದು ವಾರದ ಬಳಿಕ ಬಿಡುಗಡೆಯಾದರೂ ಶಾಹಿದ್ ಕಪೂರ್ ನಾಯಕರಾಗಿರುವ ಹಿಂದಿ ಸಿನಿಮಾ ಜೆರ್ಸಿಗೆ ಗಲ್ಲಾಪೆಟ್ಟಿಗೆಯಲ್ಲಿ ಹೊಡೆತ ಬಿದ್ದಿದೆ.
ಶುಕ್ರವಾರ ಬಿಡುಗಡೆಯಾದ ಜೆರ್ಸಿ ಎರಡನೇ ದಿನಕ್ಕೆ ಗಳಿಸಿದ್ದು ಸರಾಸರಿ 5 ಕೋಟಿ ರೂ. ಈ ಸಿನಿಮಾಗೆ ಹೋಲಿಸಿದರೆ ಕೆಜಿಎಫ್ 2 ದುಪ್ಪಟ್ಟು ಆದಾಯ ಪಡೆದುಕೊಂಡಿದೆ. ಕೆಜಿಎಫ್ 2 ಈಗಾಗಲೇ ಹಿಂದಿಯಲ್ಲಿ 300 ಕೋಟಿ ರೂ. ಗಳಿಕೆ ದಾಟಿದೆ.
ಲಾಕ್ ಡೌನ್ ಬಳಿಕ ಬಾಲಿವುಡ್ ಸಿನಿಮಾಗಳು ಜನರಿಗೆ ಇಷ್ಟವಾಗುತ್ತಲೇ ಇಲ್ಲ. ಬಾಲಿವುಡ್ ಸಿನಿಮಾಗಳು ಸೂಪರ್ ಹಿಟ್ ಆದ ದಾಖಲೆಯೇ ಇಲ್ಲ.