Publish Date: Wed, 27 Apr 2022 (16:43 IST)
Updated Date: Wed, 27 Apr 2022 (16:45 IST)
ಬೆಂಗಳೂರು: ಬಾಕ್ಸ್ ಆಫೀಸ್ ನಲ್ಲಿ ಕೆಜಿಎಫ್ 2 ಸಿನಿಮಾ ಭರ್ಜರಿ ಯಶಸ್ಸು ಸಾಧಿಸಿದ್ದು, 900 ಕೋಟಿ ರೂ. ಗೂ ಹೆಚ್ಚು ಗಳಿಕೆ ಮಾಡಿದೆ.
ಇನ್ನೇನು 1000 ಕೋಟಿ ರೂ.ಗಳಿಕೆ ಮಾಡಿದ ದಾಖಲೆ ಮಾಡಲಿದೆ. ಆ ಮೂಲಕ ಕನ್ನಡದ ಮೂಲ ಸಿನಿಮಾವೊಂದು 1000 ಕೋಟಿ ರೂ. ಗಳಿಕೆ ಮಾಡಿದ ದಾಖಲೆ ಮಾಡಲಿದೆ.
ವಿಶೇಷವೆಂದರೆ ಈ ವಾರ ಹಿಂದಿಯಲ್ಲಿ ಶಾಹಿದ್ ಕಪೂರ್ ಅಭಿನಯದ ಜೆರ್ಸಿ ಬಿಡುಗಡೆಯಾಗಿತ್ತು. ಹಾಗಿದ್ದರೂ ಕೆಜಿಎಫ್ ಅಬ್ಬರಕ್ಕೆ ಯಾವುದೂ ಬ್ರೇಕ್ ಹಾಕಿಲ್ಲ.