Select Your Language

Notifications

webdunia
webdunia
webdunia
webdunia

ಮದುವೆ ಸೀರೆ ಅಕ್ಕಿನೇನಿ ಕುಟುಂಬಕ್ಕೆ ವಾಪಸ್ ಮಾಡಿದ ಸಮಂತಾ

ಮದುವೆ ಸೀರೆ ಅಕ್ಕಿನೇನಿ ಕುಟುಂಬಕ್ಕೆ ವಾಪಸ್ ಮಾಡಿದ ಸಮಂತಾ
ಹೈದರಾಬಾದ್ , ಶುಕ್ರವಾರ, 11 ಮಾರ್ಚ್ 2022 (08:40 IST)
ಹೈದರಾಬಾದ್: ನಾಗಚೈತನ್ಯರಿಂದ ವೈವಾಹಿಕ ಜೀವನ ಮುರಿದುಕೊಂಡ ನಂತರ ಸಮಂತಾ ಈಗ ತಮ್ಮ ಮದುವೆಯಲ್ಲಿ ಬಳಸಿದ್ದ ಸೀರೆಯನ್ನೂ ಅಕ್ಕಿನೇನಿ ಕುಟುಂಬಕ್ಕೆ ಹಿಂತಿರುಗಿಸಿದ್ದಾರೆ.

ಅಕ್ಟೋಬರ್ 2 ರಂದು ಇಬ್ಬರೂ ಬೇರೆಯಾಗುವ ನಿರ್ಧಾರ ಪ್ರಕಟಿಸಿದ್ದರು. ಅದಾದ ಬಳಿಕ ಸಮಂತಾ ನಾಗಚೈತನ್ಯ ಜೊತೆಗಿನ ಎಲ್ಲಾ ಫೋಟೋಗಳನ್ನು ಸಾಮಾಜಿಕ ಜಾಲತಾಣದಿಂದ ಡಿಲೀಟ್ ಮಾಡಿದ್ದರು.

ಇದೀಗ ಮದುವೆಯಲ್ಲಿ ತೊಟ್ಟಿದ್ದ ಸೀರೆಯನ್ನೂ ಸಮಂತಾ ಅಕ್ಕಿನೇನಿ ಕುಟುಂಬಕ್ಕೆ ಹಿಂತಿರುಗಿಸಿದ್ದಾರೆ ಎಂಬ ಸುದ್ದಿಯಿದೆ. ಸೀರೆ ಮಾತ್ರವಲ್ಲದೆ, ನಾಗಚೈತನ್ಯ ನೀಡಿದ್ದ ಎಲ್ಲಾ ವಸ್ತುಗಳನ್ನೂ ಹಿಂತಿರುಗಿಸಲು ಸಮಂತಾ ನಿರ್ಧರಿಸಿದ್ದಾರಂತೆ. ಇನ್ನು ಮದುವೆ ಸೀರೆಯನ್ನು ಸಮಂತಾ ವಾಪಸ್ ಮಾಡಿದ್ದು ಅಕ್ಕಿನೇನಿ ಕುಟುಂಬಕ್ಕೆ ಬೇಸರವುಂಟು ಮಾಡಿದೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

‘ಮಾಜಿ’ಗಳ ಬಗ್ಗೆ ಮಾತಾಡಲ್ಲ ಎಂದ ರಶ್ಮಿಕಾ ಮಂದಣ್ಣ