Select Your Language

Notifications

webdunia
webdunia
webdunia
webdunia

ಗೆಲುವಿನ ಕುದುರೆ ಹತ್ತಿದ್ದ ರಶ್ಮಿಕಾಗೆ ಮೊದಲ ಬಾರಿಗೆ ಸೋಲಿನ ರುಚಿ

ಗೆಲುವಿನ ಕುದುರೆ ಹತ್ತಿದ್ದ ರಶ್ಮಿಕಾಗೆ ಮೊದಲ ಬಾರಿಗೆ ಸೋಲಿನ ರುಚಿ
ಹೈದರಾಬಾದ್ , ಬುಧವಾರ, 9 ಮಾರ್ಚ್ 2022 (10:18 IST)
ಹೈದರಾಬಾದ್: ಕಿರಿಕ್ ಪಾರ್ಟಿಯಿಂದ ಹಿಡಿದು ಈವರೆಗೆ ರಶ್ಮಿಕಾ ಮಂದಣ್ಣ ಬೇರೆ ಬೇರೆ ಭಾಷೆಗಳಲ್ಲಿ ನಟಿಸಿದರೂ ಅವರ ಪ್ರತಿಯೊಂದು ಸಿನಿಮಾವೂ ಹಿಟ್ ಆಗಿ ಬಾಲಿವುಡ್ ನಲ್ಲೂ ಬೇಡಿಕೆ ಗಿಟ್ಟಿಸಿಕೊಂಡಿದ್ದರು.

ಆದರೆ ಈಗ ಮೊದಲ ಬಾರಿಗೆ ರಶ್ಮಿಕಾ ಸೋಲಿನ ರುಚಿ ಕಂಡಿದ್ದಾರೆ. ಅವರು ನಟಿಸಿದ್ದ ಅಡಾವಲ್ಲು ಮೀಕು ಜೊಹಾರ್ಲು ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಮುಗ್ಗರಿಸಿದೆ. ಈ ಮೂಲಕ ಇದುವರೆಗೆ ಕೋಟಿ ಕೋಟಿ ಬಾಚಿಕೊಳ್ಳುತ್ತಿದ್ದ ರಶ್ಮಿಕಾ ಸಿನಿಮಾ ಮೊದಲ ಬಾರಿಗೆ ಮುಗ್ಗರಿಸಿದೆ.

ರಶ್ಮಿಕಾ ಜೊತೆಗೆ ಶಾರ್ವಾನಂದ್, ಖುಷ್ಬೂ,ರಾಧಿಕಾ ಶರತ್ ಕುಮಾರ್ ಸೇರಿದಂತೆ ಬಹುತಾರಾಗಣವಿದ್ದ ಸಿನಿಮಾ ಇದಾಗಿತ್ತು. ಮಾರ್ಚ್ 4 ರಂದು ಸಿನಿಮಾ ರಿಲೀಸ್ ಆಗಿದೆ. ಆದರೆ ಇದುವರೆಗೆ ಹೇಳಿಕೊಳ್ಳುವಂತಹ ಸದ್ದು ಮಾಡಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ಪುನೀತ್ ಆತ್ಮಕ್ಕೆ ಸಂತೋಷದ ಮಜ್ಜನ ಮಾಡಿ: ಜಗ್ಗೇಶ್ ಕರೆ