Publish Date: Wed, 09 Mar 2022 (10:08 IST)
Updated Date: Wed, 09 Mar 2022 (10:11 IST)
ಬೆಂಗಳೂರು: ಪುನೀತ್ ರಾಜ್ ಕುಮಾರ್ ಅಭಿನಯದ ಕೊನೆ ಸಿನಿಮಾ ಜೇಮ್ಸ್. ಇದೇ ಕೊನೇ ಬಾರಿಗೆ ಅಭಿಮಾನಿಗಳಿಗೆ ಅವರ ಸಿನಿಮಾ ಬಿಡುಗಡೆಯ ಸಂಭ್ರಮಾಚರಿಸಲು ಅವಕಾಶ ಸಿಗುತ್ತಿದೆ. ಇದು ಅಭಿಮಾನಿಗಳಿಗೆ ಒಂದು ರೀತಿಯಲ್ಲಿ ಬೇಸರವನ್ನೂ ಉಂಟು ಮಾಡಿದೆ.
ಹೀಗಾಗಿ ಕೊನೆಯ ಬಾರಿಗೆ ತಮ್ಮ ಮೆಚ್ಚಿನ ಅಪ್ಪುವನ್ನು ತೆರೆ ಮೇಲೆ ಸಂಭ್ರಮಿಸಲು ಅಭಿಮಾನಿಗಳು ಭರ್ಜರಿ ಸಿದ್ಧತೆ ನಡೆಸಿದ್ದಾರೆ.
ಈ ನಡುವೆ ನವರಸನಾಯಕ ಜಗ್ಗೇಶ್ ಪುನೀತ್ ಅಭಿಮಾನಿಗಳಿಗೆ ವಿಶೇಷ ಕರೆ ಕೊಟ್ಟಿದ್ದಾರೆ. ಆತ್ಮೀಯ ಹೃದಯದ ಕೊನೆಯ ಕಲಾಕೃತಿಗೆ ಕನ್ನಡದ ಮನಗಳು ಮನದುಂಬಿ ಹರಸಿಬಿಡಿ. ಪುನೀತ್ ರಾಜ್ ಕುಮಾರ್ ಆತ್ಮಕ್ಕೆ ಸಂತೋಷದ ಮಜ್ಜನವಾಗಲಿ. ನಮ್ಮಗಳಿಗೆ ಕಲಾಸಂತೋಷ ನೀಡಿಹೋದ ಅವನಿಗೆ ನಾವು ನೀಡಲಾಗುವುದು ಒಂದೆ ಅದು ಪ್ರೀತಿ ಮಾತ್ರ ಎಂದು ಜಗ್ಗೇಶ್ ಕರೆಕೊಟ್ಟಿದ್ದಾರೆ.