Publish Date: Thu, 10 Mar 2022 (17:15 IST)
Updated Date: Thu, 10 Mar 2022 (17:17 IST)
ಹೈದರಾಬಾದ್: ಸಾಮಾಜಿಕ ಜಾಲತಾಣದಲ್ಲಿ ಜನಪ್ರಿಯರಾಗಿರುವ ನಟಿ ರಶ್ಮಿಕಾ ಮಂದಣ್ಣ ಈಗ ತಮ್ಮದೇ ಯೂ ಟ್ಯೂಬ್ ಚಾನೆಲ್ ಲಾಂಚ್ ಮಾಡಿದ್ದಾರೆ.
ಈ ಯೂ ಟ್ಯೂಬ್ ಚಾನೆಲ್ ನಲ್ಲಿ ಅಭಿಮಾನಿಗಳ ಪ್ರಶ್ನೆಗೆ ಉತ್ತರಿಸಲು ತೀರ್ಮಾನಿಸಿದ್ದಾರೆ. ಆದರೆ ನೀವು ಮಾಜಿಗಳ ಬಗ್ಗೆ ಕೇಳುವಂತಿಲ್ಲ ಎಂದಿದ್ದಾರೆ.
ಹಿನ್ನಲೆ ಧ್ವನಿಯಲ್ಲಿ ಎಲ್ಲರೂ ನಿಮ್ಮ ಎಕ್ಸ್ ಬಗ್ಗೆ ಕೇಳಲು ಬಯಸುತ್ತಾರೆ. ಆದರೆ ನಾವು ನಿಮ್ಮ ವೈ ಬಗ್ಗೆ ಕೇಳಲು ಆಸಕ್ತರಾಗಿದ್ದೇವೆ ಎಂದು ಹೇಳುತ್ತದೆ. ಇದಕ್ಕೆ ರಶ್ಮಿಕಾ ನಗುತ್ತಾ ಖಂಡಿತಾ ಎನ್ನುತ್ತಾರೆ. ಈ ಪ್ರಶ್ನೋತ್ತರಾವಳಿಯಲ್ಲಿ ಅಭಿಮಾನಿಗಳು ರಶ್ಮಿಕಾಗೆ ಹಲವು ಪ್ರಶ್ನೆಗಳನ್ನು ಕೇಳಿದ್ದು ಇದಕ್ಕೆಲ್ಲಾ ರಶ್ಮಿಕಾ ಉತ್ತರಿಸಿದ್ದಾರೆ.