ಬೆಂಗಳೂರು: ನವರಸನಾಯಕ ಜಗ್ಗೇಶ್ ಎಂದರೆ ಪುನೀತ್ ರಾಜ್ ಕುಮಾರ್ ಇಷ್ಟಪಡುವ ಕಲಾವಿದರಲ್ಲಿ ಒಬ್ಬರು. ಇಬ್ಬರೂ ಕೊನೆಯ ಬಾರಿಗೆ ಒಟ್ಟಿಗೇ ತಾವು ಆರಾಧಿಸುವ ಮಂತ್ರಾಲಯದ ರಾಯರ ದರ್ಶನಕ್ಕೆ ತೆರಳಿದ್ದರು. ಇದೀಗ ಅದೇ ಪ್ರೀತಿಯ ಪುನೀತ್ ಗಾಗಿ ಜಗ್ಗೇಶ್ ಒಂದು ನಿರ್ಧಾರ ಮಾಡಿದ್ದಾರೆ.
ಪುನೀತ್ ರಾಜ್ ಕುಮಾರ್ ಹುಟ್ಟುಹಬ್ಬ ಮಾರ್ಚ್ 17 ರಂದು. ಜಗ್ಗೇಶ್ ಗೂ ಅದೇ ದಿನ ಜನ್ಮದಿನ. ಆದರೆ ಈ ಬಾರಿ ಜಗ್ಗೇಶ್ ಬರ್ತ್ ಡೇ ಆಚರಿಸದೇ ಇರಲು ತೀರ್ಮಾನಿಸಿದ್ದಾರೆ.
ಪ್ರತೀ ಬಾರಿ ಬರ್ತ್ ಡೇಗೆ ಪುನೀತ್ ಕರೆ ಮಾಡಿ ಶುಭಾಶಯ ಕೋರುತ್ತಿದ್ದರು. ಈ ಬಾರಿ ಅವನಿಲ್ಲದ ವೇಳೆ ಬರ್ತ್ ಡೇ ಆಚರಿಸಿಕೊಳ್ಳಲು ಮನಸ್ಸು ಬರುತ್ತಿಲ್ಲ. ಹೀಗಾಗಿ ಈ ಬಾರಿ ಬರ್ತ್ ಡೇ ಆಚರಿಸಿಕೊಳ್ಳಲ್ಲ ಎಂದು ಜಗ್ಗೇಶ್ ನಿರ್ಧಾರ ಮಾಡಿದ್ದಾರೆ.