Publish Date: Wed, 09 Mar 2022 (10:37 IST)
Updated Date: Wed, 09 Mar 2022 (10:39 IST)
ಬೆಂಗಳೂರು: ಸಂತೋಷ್ ಆನಂದ್ ರಾಮ್ ನಿರ್ದೇಶನದ ನವರಸನಾಯಕ ಜಗ್ಗೇಶ್ ನಾಯಕರಾಗಿರುವ ರಾಘವೇಂದ್ರ ಸ್ಟೋರ್ಸ್ ಸಿನಿಮಾದ ಡಬ್ಬಿಂಗ್ ಕೆಲಸಗಳು ಮುಕ್ತಾಯವಾಗಿದೆ.
ಈ ಮೂಲಕ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಇನ್ನು ಕೆಲವು ಪೋಸ್ಟ್ ಪ್ರೊಡಕ್ಷನ್ ಕೆಲಸ ಮುಗಿಸಿಕೊಂಡರೆ ಸಿನಿಮಾ ಬಿಡುಗಡೆಗೆ ಸಿದ್ಧವಾಗಲಿದೆ.
ಇದರೊಂದಿಗೆ ಜಗ್ಗೇಶ್ ಅಭಿನಯದ ಎರಡು ಸಿನಿಮಾಗಳು ಒಟ್ಟಿಗೇ ರಿಲೀಸ್ ಗೆ ರೆಡಿಯಾಗಿ ನಿಂತಿವೆ. ತೋತಾಪುರಿ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದ್ದು, ಅದರ ಬೆನ್ನಲ್ಲೇ ರಾಘವೇಂದ್ರ ಸ್ಟೋರ್ಸ್ ಕೂಡಾ ಜಗ್ಗೇಶ್ ಮುಗಿಸಿಕೊಟ್ಟಿದ್ದಾರೆ.