Select Your Language

Notifications

webdunia
webdunia
webdunia
webdunia

ಕೆಜಿಎಫ್ 2 ಜೊತೆಗೆ ಬರಲಿದೆ ಸಲಾರ್ ಟೀಸರ್

ಕೆಜಿಎಫ್ 2 ಜೊತೆಗೆ ಬರಲಿದೆ ಸಲಾರ್ ಟೀಸರ್
ಹೈದರಾಬಾದ್ , ಶುಕ್ರವಾರ, 8 ಏಪ್ರಿಲ್ 2022 (10:37 IST)
ಹೈದರಾಬಾದ್: ಹೊಂಬಾಳೆ ಫಿಲಂಸ್ ನಿರ್ಮಿಸುತ್ತಿರುವ ಮತ್ತೊಂದು ಬಹುನಿರೀಕ್ಷಿತ ಸಿನಿಮಾ ಸಲಾರ್. ಪ್ರಭಾಸ್ ನಾಯಕರಾಗಿರುವ ಈ ಸಿನಿಮಾದ ಟೀಸರ್ ಕೆಜಿಎಫ್ 2 ಸಿನಿಮಾ ಪ್ರದರ್ಶನದ ಜೊತೆಗೇ ಬರಲಿದೆ ಎನ್ನಲಾಗುತ್ತಿದೆ.

ಏಪ್ರಿಲ್ 14 ರಂದು ವಿಶ್ವದಾದ್ಯಂತ ಕೆಜಿಎಫ್ 2 ಸಿನಿಮಾ ಬಿಡುಗಡೆಯಾಗುತ್ತಿದೆ. ಇದೇ ದಿನ ಸಲಾರ್ ಸಿನಿಮಾ ಟೀಸರ್ ಬಿಡುಗಡೆ ಮಾಡಲು ಚಿತ್ರತಂಡ ತಯಾರಿ ನಡೆಸಿದೆ.

ಥಿಯೇಟರ್ ನಲ್ಲಿ ಕೆಜಿಎಫ್ 2 ಪ್ರಸಾರದ ನಡುವೆ ಸಲಾರ್ ಟೀಸರ್ ಪ್ರದರ್ಶನವಾಗಲಿದೆ ಎನ್ನಲಾಗುತ್ತಿದೆ. ಇತ್ತೀಚೆಗೆ ಜನಪ್ರಿಯ ಸಿನಿಮಾಗಳ ಪ್ರದರ್ಶನದ ವೇಳೆ ಮತ್ತೊಂದು ಸಿನಿಮಾದ ಟೀಸರ್ ಪ್ರದರ್ಶಿಸಿ ಪ್ರಚಾರ ನೀಡುವುದು ಟ್ರೆಂಡ್ ಆಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಿನಿಮಾಗೆ ಎಂಟ್ರಿ ಕೊಟ್ಟ ಸಚಿವ ಸುಧಾಕರ್