Publish Date: Fri, 01 Dec 2023 (09:20 IST)
Updated Date: Fri, 01 Dec 2023 (09:28 IST)
ಹೈದರಾಬಾದ್: ಹೊಂಬಾಳೆ ಫಿಲಂಸ್ ನಿರ್ಮಾಣದ ಪ್ರಶಾಂತ್ ನೀಲ್ ನಿರ್ದೇಶನದ ಪ್ರಭಾಸ್ ನಾಯಕರಾಗಿರುವ ಸಲಾರ್ 1 ಟ್ರೈಲರ್ ಇಂದು ಲಾಂಚ್ ಆಗುತ್ತಿದೆ.
ಡಿಸೆಂಬರ್ 22 ರಂದು ಸಿನಿಮಾ ಬಹುಭಾಷೆಗಳಲ್ಲಿ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಅದಕ್ಕೆ ಮೊದಲು ಚಿತ್ರತಂಡ ಕುತೂಹಲಭರಿತ ಟ್ರೈಲರ್ ಲಾಂಚ್ ಮಾಡಲು ಸಿದ್ಧತೆ ನಡೆಸಿದೆ.
ಇಂದು ಸಂಜೆ 7.19 ಕ್ಕೆ ಸಲಾರ್ ಟ್ರೈಲರ್ ರಿಲೀಸ್ ಆಗಲಿದೆ. ಹೊಂಬಾಳೆ ಫಿಲಂಸ್ ಯೂ ಟ್ಯೂಬ್ ಚಾನೆಲ್ ನಲ್ಲಿ ಟ್ರೈಲರ್ ವೀಕ್ಷಿಸಬಹುದು. ಕೆಲವು ಸಮಯದ ಮೊದಲು ಚಿತ್ರತಂಡ ಟೀಸರ್ ಬಿಟ್ಟಾಗಲೇ ಭಾರೀ ಪ್ರತಿಕ್ರಿಯೆ ಬಂದಿತ್ತು. ಹೀಗಾಗಿ ಟ್ರೈಲರ್ ಮೇಲೆಯೂ ಅಷ್ಟೇ ನಿರೀಕ್ಷೆಯಿದೆ.
ಕೆಜಿಎಫ್ 2 ಸಿನಿಮಾ ನಂತರ ಪ್ರಶಾಂತ್ ನೀಲ್ ನಿರ್ದೇಶಿಸಿರುವ ಮತ್ತೊಂದು ಆಕ್ಷನ್ ಪ್ಯಾಕ್ಡ್ ಸಿನಿಮಾ ಇದು. ಅತ್ತ ಪ್ರಭಾಸ್ ಕೂಡಾ ಸತತ ಸೋಲುಗಳ ಬಳಿಕ ಬಿಗ್ ಬ್ರೇಕ್ ನಿರೀಕ್ಷೆಯಲ್ಲಿದ್ದಾರೆ. ಸಲಾರ್ ಸಿನಿಮಾಗೆ ದೇಶದಲ್ಲಿ ಮಾತ್ರವಲ್ಲ, ವಿದೇಶದಲ್ಲೂ ಅಡ್ವಾನ್ಸ್ ಟಿಕೆಟ್ ಬುಕಿಂಗ್ ಗೆ ಭರ್ಜರಿ ಪ್ರತಿಕ್ರಿಯೆ ಬಂದಿತ್ತು. ಹೀಗಾಗಿ ಸಿನಿಮಾ ಮತ್ತೊಂದು ಸೂಪರ್ ಡೂಪರ್ ಹಿಟ್ ಆಗುವ ನಿರೀಕ್ಷೆಯಿದೆ.