Select Your Language

Notifications

webdunia
webdunia
webdunia
webdunia

ಸಲಾರ್ ಸಿನಿಮಾಗೆ ಉಚಿತ ಟಿಕೆಟ್ ಆಫರ್ ನೀಡಿದ ಹೊಂಬಾಳೆ ಫಿಲಂಸ್!

ಸಲಾರ್ ಸಿನಿಮಾಗೆ ಉಚಿತ ಟಿಕೆಟ್ ಆಫರ್ ನೀಡಿದ ಹೊಂಬಾಳೆ ಫಿಲಂಸ್!
ಹೈದರಾಬಾದ್ , ಗುರುವಾರ, 30 ನವೆಂಬರ್ 2023 (16:50 IST)
ಹೈದರಾಬಾದ್: ಡಿಸೆಂಬರ್ 22 ರಂದು ಬಿಡುಗಡೆಯಾಗಲಿರುವ ಹೊಂಬಾಳೆ ಫಿಲಂಸ್ ನಿರ್ಮಾಣದ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ಸಲಾರ್ ಉಚಿತವಾಗಿ ವೀಕ್ಷಿಸಲು ಆಫರ್ ನೀಡಲಾಗಿದೆ!

ಪ್ರಶಾಂತ್ ನೀಲ್ ನಿರ್ದೇಶನದ ಪ್ರಭಾಸ್ ನಾಯಕರಾಗಿರುವ ಸಲಾರ್ ಸಿನಿಮಾ ಮೊದಲ ದಿನ ಮೊದಲ ಶೋ ನೋಡಲು ಅಭಿಮಾನಿಗಳು ಕಾತುರರಾಗಿದ್ದಾರೆ. ಈಗಾಗಲೇ ಟಿಕೆಟ್ ಗೆ ಭಾರೀ ಬೇಡಿಕೆ ಬಂದಿದೆ. ವಿದೇಶಗಳಲ್ಲೂ ಅಡ್ವಾನ್ಸ್ ಬುಕಿಂಗ್ ಗೆ ಭರ್ಜರಿ ಬೇಡಿಕೆಯಿದೆ.

ಹೀಗಿರುವಾಗ ಮೊದಲ ದಿನ ಟಿಕೆಟ್ ಸಿಗುವುದೇ ಕಷ್ಟ ಎಂಬ ಪರಿಸ್ಥಿತಿಯಿದೆ. ಇಂತಹ ಸಂದರ್ಭದಲ್ಲಿ ಹೊಂಬಾಳೆ ಫಿಲಂಸ್ ಅಭಿಮಾನಿಗಳಿಗೆ ವಿಶೇಷ ಆಫರ್ ನೀಡಿದೆ.

ಹೊಂಬಾಳೆ ಫಿಲಂಸ್‍ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಫೋಟೋವೊಂದನ್ನು ಪ್ರಕಟಿಸಲಾಗಿದೆ. ಈ ಫೋಟೋಗೆ ಆಕರ್ಷಕ ಶೀರ್ಷಿಕೆ ಕೊಡುವ ಐದು ಮಂದಿಗೆ ಸಲಾರ್ ಸಿನಿಮಾಗೆ ಉಚಿತ ಟಿಕೆಟ್ ನೀಡುವುದಾಗಿ ಘೋಷಣೆ ಮಾಡಲಾಗಿದೆ. ಯಾರು ಬೇಕಾದರೂ ಕಾಮೆಂಟ್ ಮೂಲಕ ಶೀರ್ಷಿಕೆ ನೀಡಬಹುದು. ಅವುಗಳಲ್ಲಿ ಆಕರ್ಷಕವಾಗಿ ಐವರಿಗೆ ಅದೃಷ್ಟ ಖುಲಾಯಿಸಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸರತಿ ಸಾಲಿನಲ್ಲಿ ನಿಂತು ವೋಟ್ ಮಾಡಿದ ಮೆಗಾಸ್ಟಾರ್ ಚಿರಂಜೀವಿ