Publish Date: Thu, 21 Dec 2023 (08:21 IST)
Updated Date: Thu, 21 Dec 2023 (10:15 IST)
ಹೈದರಾಬಾದ್: ನಾಳೆ ಬಿಡುಗಡೆಯಾಗಲಿರುವ ಸಲಾರ್ ಮತ್ತು ಇಂದು ಬಿಡುಗಡೆಯಾಗುತ್ತಿರುವ
ಬಾಲಿವುಡ್ ನ ಡಂಕಿ ನಡುವೆ ಥಿಯೇಟರ್ ನಲ್ಲಿ ತೀವ್ರ ಪೈಪೋಟಯಿದೆ.
ಕೆಲವು ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳು ದಕ್ಷಿಣ ಭಾರತದ ಮೂಲದ ಪ್ಯಾನ್ ಇಂಡಿಯಾ ಸಿನಿಮಾ ಸಲಾರ್ ಗೆ ಥಿಯೇಟರ್ ನೀಡದೇ ಬಾಲಿವುಡ್ ನ ಡಂಕಿ ಸಿನಿಮಾಗೆ ಹೆಚ್ಚು ಪ್ರಾಶಸ್ತ್ಯ ನೀಡಿ ವಂಚಿಸುತ್ತಿದೆ ಎಂಬ ಆರೋಪ ಕೇಳಿಬಂದಿದೆ.
ಬೇಕೆಂದೇ ಉತ್ತರ ಭಾರತದಲ್ಲಿ ಮಲ್ಟಿಪ್ಲೆಕ್ಸ್ ಗಳಲ್ಲಿ ಸಲಾರ್ ನಲ್ಲಿ ಹೆಚ್ಚಿನ ಶೋ ಕೊಡದೇ ಡಂಕಿಗೆ ಅನುಕೂಲ ಮಾಡಿಕೊಡಲಾಗುತ್ತಿದೆ ಎಂಬ ಆರೋಪ ಬಂದಿದೆ. ಹೀಗಾಗಿ ಸಲಾರ್ ತಂಡ ಮಲ್ಟಿಪ್ಲೆಕ್ಸ್ ಗಳ ವಿರುದ್ಧ ತಿರುಗಿಬಿದ್ದಿದೆ.
ದಕ್ಷಿಣ ಭಾರತದಲ್ಲೂ ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳಲ್ಲಿ ಸಲಾರ್ ಬಿಡುಗಡೆ ಮಾಡದೇ ಇರಲು ನಿರ್ಧರಿಸಿದೆ. ಡಂಕಿ ಮತ್ತು ಸಲಾರ್ ಗೆ ಸಮನಾಗಿ ಶೋ ನೀಡಬೇಕಿತ್ತು. ಆದರೆ ಉತ್ತರ ಭಾರತದಲ್ಲಿ ಶಾರುಖ್ ಸಿನಿಮಾಗೆ ಹೆಚ್ಚು ಶೋ ನೀಡಿ ತಾರತಮ್ಯ ಮಾಡುತ್ತಿರುವುದು ಹೊಂಬಾಳೆ ಫಿಲಂಸ್ ಅಸಮಾಧಾನಕ್ಕೆ ಕಾರಣವಾಗಿದೆ. ಈ ಹಿನ್ನಲೆಯಲ್ಲಿ ದಕ್ಷಿಣ ಭಾರತದಲ್ಲೂ ಮಲ್ಟಿಪ್ಲೆಕ್ಸ್ ಗಳಲ್ಲಿ ಚಿತ್ರ ಬಿಡುಗಡೆ ಮಾಡದೇ ಇರಲು ಹೊಂಬಾಳೆ ಫಿಲಂಸ್ ನಿರ್ಧರಿಸಿದೆ ಎನ್ನಲಾಗಿದೆ.