Select Your Language

Notifications

webdunia
webdunia
webdunia
webdunia

ಮಹಿಳೆಯರ ಬಗ್ಗೆ ಅಜಯ್ ದೇವಗನ್ ಹೇಳಿದ್ದೇನು ?

Ajay Devgan
mumbai , ಬುಧವಾರ, 20 ಡಿಸೆಂಬರ್ 2023 (14:55 IST)
ನನ್ನ ಲೈಫಲ್ಲಿ ಮಹಿಳೆಯರೇ ಸ್ಫೂರ್ತಿ. ನಾನು ಮಹಿಳೆಯರ ಮೈಂಡ್ ಸೆಟ್ ಅರ್ಥಮಾಡಿಕೊಂಡಿದ್ದೇನೆ. ನನಗೆ ಇಬ್ಬರು ಸಹೋದರಿಯರಿದ್ದಾರೆ. ಅಲ್ದೇ ನನ್ನ ಅಜ್ಜಿ ಇದ್ದಾಳೆ. ಇವರೆಲ್ಲಾ ತುಂಬಾ ಸ್ಟ್ರಾಂಗ್ ವುಮೇನ್ ಎಂದು ಮಾಧ್ಯಮದವರ ಪ್ರಶ್ನೆಗೆ ಬಾಲಿವುಡ್ ನಟ ಅಜಯ್ ದೇವಗನ್ ಪ್ರತಿಕ್ರಿಯೆ ನೀಡಿದ್ದಾರೆ. 
 
ಬಾಲಿವುಡ್ ನಟ ಅಜಯ್ ದೇವಗನ್ ಮಹಿಳೆಯರ ಮೈಂಡ್ ಸೆಟ್ ಅರ್ಥಮಾಡಿಕೊಂಡಿರುವ ಬಗ್ಗೆ ರಿವೀಲ್ ಮಾಡಿದ್ದಾರೆ. ಮಹಿಳೆಯರಿಂದಲೇ ತಮ್ಮ ಖಾಸಗಿ ಬದುಕು ಸುತ್ತವರೆದಿದೆ ಎಂದು ಅಜಯ್ ತಿಳಿಸಿದ್ದಾರೆ.  
 
ನನ್ನ ಲೈಫ್‌ಲ್ಲಿ ಸ್ಟ್ರಾಂಗ್ ವೈಫ್ ಇದ್ದಾಳೆ. ಅಲ್ಲದೇ ಸ್ಟ್ರಾಂಗ್ ಡಾಟರ್ ಕೂಡ ಇದ್ದಾಳೆ, ಹಾಗಾಗಿ ನನ್ನ ಸುತ್ತ ಮಹಿಳೆಯರಿಂದಲೇ ಕೂಡಿದೆ ಎನ್ನುವುದಕ್ಕೆ ನನಗೆ ಹೆಮ್ಮೆ ಎನ್ನಿಸುತ್ತದೆ ಎಂದು ತಿಳಿಸಿದರು. ನನ್ನಗೆ ತಂದೆ ಕೂಡ ಇದ್ದಾರೆ. ಆದ್ರೆ ನನ್ನ ಲೈಫ್ಲ್ಲಿ 9 ಮಂದಿ ಮಹಿಳೆಯರಿದ್ದಾರೆ. ನನ್ನ ಕುಟುಂಬದಲ್ಲಿರುವ ಇವರೆಲ್ಲಾ ನಾನು ನನ್ನ ಸಮಸ್ಯೆಯನ್ನು ಇವರ ಜತೆ ಶೇರ್ ಮಾಡುತ್ತೇನೆ.
 
ನನ್ನ ಹೆಂಡತಿ ಕಾಜೋಲ್,ಮಗಳು ಎಲ್ಲರೂ ಜತೆಗೂಡಿ ಸಮಸ್ಯೆ ಬಗ್ಗೆ ಚರ್ಚೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ.ಅಲ್ಲದೇ ಅಜಯ್ ಫೌಂಡೇಶನ್ ಜತೆಕೆ ಕೈ ಜೋಡಿಸಿದ್ದಾರೆ. ಈ ಫೌಂಡೇಶನ್ ಮುಖ್ಯವಾಗಿ ಹೆಣ್ಣು ಮಗುವಿನ ಮಹತ್ವದ ಬಗ್ಗೆ ಅರಿವು ಮೂಡಿಸುತ್ತದೆ. 
 
ಹಾಗೇ ಗುಡ್ ವಿಲ್ ಅಂಬಾಸಿಡರ್ ಆಗಿರೋ ಅಜಯ್ ಹೆಣ್ಣು ಮಕ್ಕಳಿಗೆ ಶಿಕ್ಷಣ ಮುಖ್ಯವಾದದ್ದು ಎಂದು ಅವರು ಹೇಳುತ್ತಾರೆ. ಇಂದಿನ ದಿನಗಳಲ್ಲಿ ಹೆಣ್ಣು ಮಕ್ಕಳಿಗೆ ಶಿಕ್ಷಣ ಮಹತ್ವವಾದದ್ದು ಎಂದು ಅಜಯ್ ದೇವಗನ್ ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಲ್ಮಾನ್‌ಖಾನ್‌ರೊಂದಿಗೆ ನಟಿಸಲಿದ್ದಾರಾ ಐಶ್ವರ್ಯ ರೈ ?