Select Your Language

Notifications

webdunia
webdunia
webdunia
webdunia

ಬಾಲಿವುಡ್‌ನಲ್ಲಿ ಮುಂದುವರಿದ ನಟಿಯರ ಶೋಷಣೆ

Bollywood
mumbai , ಬುಧವಾರ, 20 ಡಿಸೆಂಬರ್ 2023 (14:06 IST)
ಬೇಡಿಕೆ ಜತೆಗೆ ನಿರ್ದೇಶಕರು, ಹಾಗೂ ನಿರ್ಮಾಪಕರು ಅಡ್ಜಸ್ಟ್ ಮಾಡ್ಕೊಳ್ಳಿ ಎಂಬ ಬೇಡಿಕೆ ಇಡುತ್ತಾರೆ ಎನ್ನುವ ರಾಧಿಕಾ ಆಪ್ಟೆಗೆ ನಟರೊಬ್ಬರ ಮೇಲೆ ಆರೋಪವಿತ್ತು. ಸಿನಿಮಾದಲ್ಲಿ ಅವಕಾಶ ಬೇಕು ಎಂದರೆ, ಲೈಗಿಂಕ ಸುಖಕ್ಕೆ ಸಹಕರಿಸು ಎಂಬ ಧಾಟಿಯಲ್ಲಿ ಒಬ್ಬ ನಟ ಹೇಳಿದ್ರಂತೆ. ಇಂಥ ಅನುಭವ ಬಾಲಿವುಡ್‌ನಲ್ಲೂ ಕಾಲಿಟ್ಟಾಗಲೂ ಆಗಿತ್ತು ಎಂದು ನಟಿ ರಾಧಿಕಾ ಆಪ್ಟೆ ಹೇಳಿದ್ದರು.
 
ಚಿತ್ರರಂಗದಲ್ಲಿ ಬೆಳೆಯುವುದು ಎಲ್ಲಾ ನಟಿಯರ ಆಸೆ. ಚಿತ್ರದ ಅವಕಾಶಕ್ಕಾಗಿ ಕಾಯುವ ಈ ನಟಿಯರು ಆಫರ್ ಬಂದ್ರು ಒಪ್ಪಿಕೊಳ್ತಿಲ್ಲ. ಅಂಥ ನಟಿಯರ ಸಾಲಿಗೆ ಸೇರಿಕೊಳ್ತಾರೆ ಕಬಾಲಿ ನಟಿ ರಾಧಿಕಾ ಆಪ್ಟೆ ಹಾಗೂ ಸುರ್ವಿನ್ ಚಾವ್ಲಾ. ಸಿನಿಮಾ ರಂಗದಲ್ಲಿ ಬೆಳೆಯುತ್ತಿರುವ ಈ ನಟಿಯರು, ಕೇವಲ ಸಿನಾಮಾವಷ್ಟೇ ಅಲ್ಲ, ತಮ್ಮ ನಿಜ ಜೀವನದಲ್ಲೂ ಇಂಥ ಸಮಸ್ಯೆ ಎದುರಿಸುತ್ತಿದ್ದಾರೆ. 
 
ಇನ್ನೂ ನಟಿ ಸುರ್ವೀನ್ ಚಾವ್ಲಾಗೂ ಇಂಥದ್ದೇ ಕಹಿ ಅನುಭವವಾಗಿತ್ತು. ಕನ್ನಡದ ಪರಮೇಶ್ ಪಾನವಾಲಾ ಚಿತ್ರದಲ್ಲಿ ನಟಿಸಿ, ತಮಿಳು, ಪಂಜಾಬಿ, ಹಿಂದಿ ಚಿತ್ರರಂಗದಲ್ಲಿ ನೆಲೆ ಕಾಣುತ್ತಿರುವ ನಟಿ ಸುರ್ವೀನ್‌ಗೂ ಇದೇ ರೀತಿ ಅನುಭವವಾಗಿದೆಯಂತೆ. ಹಿಂದಿ ಬಾರದ ಒಬ್ಬ ನಿರ್ದೇಶಕರು ಒಂದು ಕಂಡೀಶನನ್ನು ಹಾಕಿದ್ದರು ಎಂದು ಆರೋಪ ಮಾಡಿದ್ದರು.
 
ಅಲ್ಲದೇ ಈ ಹಿಂದೆ ನಟಿ ಕಲ್ಕಿ ಕೋಚ್ಲಿನ್ ಹಲವು ಬಾರಿ ಪ್ರತಿಭಟಿಸಿದ್ದರು. ಕಂಗನಾ ರಣಾವತ್ ಕೂಡ ತನು ವೆಡ್ಸ್ ಮನು ಚಿತ್ರದಲ್ಲಿ ನಟಿಸುವಾಗ ನಿರ್ದೇಶಕ ಆನಂದ್ ರೈ ಅವರ ಅನುಚಿತ ವರ್ತನೆಯನ್ನು ಖಂಡಿಸಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ರಶ್ಮಿಕಾ ಮಂದಣ್ಣ ಡೀಪ್ ಫೇಕ್ ಕೇಸ್: ನಾಲ್ವರನ್ನು ಬಂಧಿಸಿದ ಪೊಲೀಸರು