Select Your Language

Notifications

webdunia
webdunia
webdunia
webdunia

ಜಾಹ್ನವಿ ಕಪೂರ್ ಲಿಪ್‌ಲಾಕ್ ವಿಡಿಯೋ ಬಹಿರಂಗ: ಬಾಲಿವುಡ್‌ನಲ್ಲಿ ಕೋಲಾಹಲ

Jahnavi Kapoor Boyfriend
mumbai , ಬುಧವಾರ, 20 ಡಿಸೆಂಬರ್ 2023 (12:11 IST)
ಬಾಲಿವುಡ್ ನಟಿ ಜಾಹ್ನವಿ ಕಪೂರ್ ತಮ್ಮ ಬಾಯ್‌ಫ್ರೆಂಡನ್ನು ಅಪ್ಪಿ ಮುದ್ದಾಡುವ, ಜೊತೆಗಿರುವ, ತಬ್ಬಿರುವ, ಲಿಪ್‌ಲಾಕ್ ಫೋಟೋಗಳು ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿವೆ. ಪ್ರಮುಖ ರಾಜಕೀಯ ಮುಖಂಡ ಸುಶೀಲ್ ಕುಮಾರ್ ಶಿಂಧೆ ಮೊಮ್ಮಗ ಶಿಖರ್ ಪಹರಿಯಾ ಜೊತೆಗೆ ಜಾಹ್ನವಿ ಪ್ರೇಮ ಕಲಾಪ ನಡೆಸುತ್ತಿರುವ ಸುದ್ದಿ ಇದೆ.
 
ಬಾಲಿವುಡ್‌ನ ಖ್ಯಾತ ತಾರೆ ಶ್ರೀದೇವಿ ಮತ್ತು ನಿರ್ಮಾಪಕ ಬೋನಿ ಕಪೂರ್ ಮಗಳು ಜಾಹ್ನವಿ ಕಪೂರ್ ಬೆಳ್ಳಿತೆರೆಗೆ ಅಡಿಯಿಡಲಿದ್ದಾರೆ ಎಂಬ ಸುದ್ದಿ ಆಗಿಂದ್ದಾಗೆ ಕೇಳಿಬರುತ್ತಲೇ ಇದೆ. ಆದರೆ ಜಾಹ್ನವಿ ಮಾತ್ರ ಬಾಯ್‌ಫ್ರೆಂಡ್ ಜೊತೆಗೆ ಜೂಟಾಟ ಆಡುವುದರಲ್ಲೇ ಹೆಚ್ಚಾಗಿ ತೊಡಗಿಕೊಂಡಿದ್ದಾರೆ.
 
ಇತ್ತೀಚೆಗೆ ಕಾರ್ಯಕ್ರಮವೊಂದಕ್ಕೆ ಜಾಹ್ನವಿ ತನ್ನ ಪ್ರೇಮಿ ಶಿಖರ್ ಅವರ ತಂದೆತಾಯಿ ಜೂತೆಗೆ ಒಂದೇ ಕಾರ್‌ನಲ್ಲಿ ಬರುವ ಮೂಲಕ ಬಾಲಿವುಡ್‌ನಲ್ಲಿ ಹಾಟ್ ಟಾಪಿಕ್ ಆಗಿತ್ತು. ಮಗಳ ಪ್ರೇಮ ವ್ಯವಹಾರಕ್ಕೆ ಶ್ರೀದೇವೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಇದರಲ್ಲಿ ಟ್ವಿಸ್ಟ್ ಏನೆಂದರೆ ಜಾಹ್ನವಿಗೆ ಇನ್ನೊಬ್ಬ ಬಾಯ್‌ಫ್ರೆಂಡ್ ಇದ್ದಾನೆ ಎಂಬುದು.
 
ಆತನೊಂದಿಗೂ ಜಾಹ್ನವಿ ತುಂಬಾ ಕ್ಲೋಸ್. ಆ ಫೋಟೋಗಳೂ ಈಗ ಲೀಕ್ ಆಗಿದ್ದು ಸಂಚಲನ ಮೂಡಿಸಿದೆ. ಅಕ್ಷತ್ ರಾಜನ್ ಅನ್ನೋ ಬಾಯ್‌ಫ್ರೆಂಡ್ ಜೊತೆಗೂ ಜಾಹ್ನವಿ ಓಡಾಡುತ್ತಿದ್ದಾಳೆ. ಅಕ್ಷತ್‍ಗೆ ಕಿಸ್ ಕೊಡುತ್ತಿರುವ ಫೋಟೋ ಈಗ ಲೀಕ್ ಆಗಿರೋದು. 
 
ಇನ್‍ಸ್ಟಾಗ್ರಾಮ್‌ನಲ್ಲಿ ಅಕ್ಷತ್ ಈ ಫೋಟೋಗಳನ್ನು ರಿಲೀಸ್ ಮಾಡಿದ್ದಾರೆ. ಇಷ್ಟಕ್ಕೂ ಜಾಹ್ನವಿ ಯಾರಿಗೆ ಮನಸ್ಸು ಕೊಟ್ಟಿದ್ದಾರೆ? ಯಾರಿಗೆ ಕೈ ಕೊಡಲಿದ್ದಾಳೆ? ಅಕ್ಷತ್‍ಗಾ ಅಥವಾ ಶಿಖರ್‌ಗಾ ಅನ್ನೋದು ಬಾಲಿವುಡ್‌ ವಲಯದಲ್ಲಿ ಚರ್ಚೆಯ ವಿಷಯವಾಗಿದೆ. 

Share this Story:

Follow Webdunia kannada

ಮುಂದಿನ ಸುದ್ದಿ

ಮತ್ತೊಂದು ಯೋಗಾ ವಿಡಿಯೋ ರಿಲೀಸ್ ಮಾಡಿದ ಶಿಲ್ಪಾ ಶೆಟ್ಟಿ