Select Your Language

Notifications

webdunia
webdunia
webdunia
webdunia

ಮೂಲ್ಕಿಯ ಅಜ್ಜಿ ಮನೆಗೆ ಭೇಟಿ ಕೊಟ್ಟ ಕೆಎಲ್ ರಾಹುಲ್ ಪತ್ನಿ ಅಥಿಯಾ

ಮೂಲ್ಕಿಯ ಅಜ್ಜಿ ಮನೆಗೆ ಭೇಟಿ ಕೊಟ್ಟ ಕೆಎಲ್ ರಾಹುಲ್ ಪತ್ನಿ ಅಥಿಯಾ
ಮಂಗಳೂರು , ಮಂಗಳವಾರ, 19 ಡಿಸೆಂಬರ್ 2023 (17:25 IST)
Photo Courtesy: Twitter
ಮಂಗಳೂರು: ಟೀಂ ಇಂಡಿಯಾ ಕ್ರಿಕೆಟಿಗ ಕೆಎಲ್ ರಾಹುಲ್ ಪತ್ನಿ, ನಟಿ ಅಥಿಯಾ ಶೆಟ್ಟಿ ತಮ್ಮ ತವರೂರಿಗೆ ಆಗಮಿಸಿದ್ದಾರೆ. ಮೂಲ್ಕಿಯಲ್ಲಿರುವ ಅಜ್ಜಿ ಮನೆಗೆ ಭೇಟಿ ಕೊಟ್ಟಿದ್ದಾರೆ.

ಅಥಿಯಾ ಎಲ್ಲರಿಗೂ ತಿಳಿದಿರುವ ಹಾಗೆ ಸುನಿಲ್ ಶೆಟ್ಟಿ ಪುತ್ರಿ. ಸುನಿಲ್ ಶೆಟ್ಟಿ ಮೂಲತಃ ಕರಾವಳಿಯವರು. ಅವರ ಕುಟುಂಬಸ್ಥರು ಈಗಲೂ ಇಲ್ಲಿಯೇ ಇದ್ದಾರೆ. ಇದೀಗ ಅಥಿಯಾ ಮೂಲ್ಕಿಯಲ್ಲಿರುವ ತಮ್ಮ ತಂದೆಯ ಮೂಲ ಮನೆಗೆ ಭೇಟಿ ಕೊಟ್ಟಿದ್ದಾರೆ.

ಅಷ್ಟೇ ಅಲ್ಲದೆ, ಬಪ್ಪನಾಡು ದುರ್ಗಾ ಪರಮೇಶ್ವರಿ ದೇವಾಲಯಕ್ಕೆ ತಮ್ಮ ಕುಟುಂಬಸ್ಥರು, ಆಪ್ತರೊಂದಿಗೆ ಭೇಟಿ ಕೊಟ್ಟಿದ್ದಾರೆ. ಈ ದೇವಾಲಯದ ಸಮೀಪವೇ ಸುನಿಲ್ ಶೆಟ್ಟಿ ಮೂಲ ಮನೆಯಿದೆ. ಹೀಗಾಗಿ ಆಗಾಗ ಸುನಿಲ್ ಶೆಟ್ಟಿ ಕುಟುಂಬ ಈ ದೇವಾಲಯಕ್ಕೆ ಭೇಟಿ ನೀಡುತ್ತಲೇ ಇರುತ್ತಾರೆ.

ಇದೀಗ ಅಥಿಯಾ ತಮ್ಮ ಮಂಗಳೂರು ಭೇಟಿಯ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಹಂಚಿಕೊಂಡಿದ್ದಾರೆ. ಇಲ್ಲಿನ ಮೀನಿನ ಊಟ, ಚಹಾ ಸೇವಿಸಿ ತವರಿನ ಘಮ ಸವಿದಿದ್ದಾರೆ. ಜೊತೆಗೆ ಎಲ್ಲೇ ಹೋದರೂ ಮೂಲ ಮರೆಯಬಾರದು ಎಂದು ಬರೆದುಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಬಿಕೆ10: ಸಂಗೀತಾ ಇಲ್ಲದೇ ಕಾರ್ತಿಕ್ ಜೀರೋ ಎಂದ ವೀಕ್ಷಕರು