Publish Date: Sat, 16 Dec 2023 (14:02 IST)
Updated Date: Sat, 16 Dec 2023 (14:02 IST)
ಹೈದರಾಬಾದ್: ನಟ ಪ್ರಭಾಸ್ ಅವರನ್ನು ಅಭಿಮಾನಿಗಳು, ಸಹಕಲಾವಿದರು ಪ್ರೀತಿಯಿಂದ ಡಾರ್ಲಿಂಗ್ ಎಂದು ಕರೆಯುತ್ತಾರೆ. ಅದು ಏಕೆ ಎಂದು ಸಲಾರ್ ಸಹ ನಟ ಪೃಥ್ವಿರಾಜ್ ಸುಕುಮಾರನ್ ಬಹಿರಂಗಪಡಿಸಿದ್ದಾರೆ.
ಸಲಾರ್ ಸಿನಿಮಾ ಪ್ರಮೋಷನ್ ವೇಳೆ ಮಾತನಾಡಿದ ಪೃಥ್ವಿರಾಜ್ ಸುಕುಮಾರನ್ ಟಾಲಿವುಡ್ ಸ್ಟಾರ್ ನಟನ ಬಗ್ಗೆ ಹೊಗಳಿಕೆಯ ಮಾತನಾಡಿದ್ದಾರೆ. ಜೊತೆಗೆ ಅವರನ್ನು ಡಾರ್ಲಿಂಗ್ ಎಂದು ಕರೆಯುವುದರ ನಿಜ ಉದ್ದೇಶವೇನೆಂದು ಬಹಿರಂಗಪಡಿಸಿದ್ದಾರೆ.
ಪ್ರಭಾಸ್ ತಮ್ಮ ಜೊತೆಗಿರುವವರನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಾರೆ. ಅವರ ಸುತ್ತಲಿನ ವಾತಾವರಣವನ್ನು ಲವಲವಿಕೆಯಿಂದಿಡುತ್ತಾರೆ. ತಮ್ಮ ಜೊತೆಗಿರುವವರು ಸರಿಯಾಗಿ ಊಟ, ತಿಂಡಿ ಮಾಡಿದ್ದಾರಾ ಎಂದು ಯೋಗಕ್ಷೇಮ ವಿಚಾರಿಸಿಕೊಳ್ಳುತ್ತಾರೆ. ಹೀಗಾಗಿಯೇ ಅವರನ್ನು ಎಲ್ಲರೂ ಪ್ರೀತಿಯಿಂದ ಡಾರ್ಲಿಂಗ್ ಎಂದು ಕರೆಯುತ್ತಾರೆ ಎಂದು ಪೃಥ್ವಿ ಹೇಳಿದ್ದಾರೆ.
ಸಲಾರ್ ಸಿನಿಮಾದಲ್ಲಿ ಪೃಥ್ವಿ ರಾಜ್ ವರದ ಎನ್ನುವ ಪಾತ್ರ ಮಾಡುತ್ತಿದ್ದಾರೆ. ದೇವ ಅಲಿಯಾಸ್ ಸಲಾರ್ ಆಗಿ ಪ್ರಭಾಸ್ ಕಾಣಿಸಿಕೊಳ‍್ಳುತ್ತಿದ್ದಾರೆ. ಸಲಾರ್ ಸಿನಿಮಾ ಡಿಸೆಂಬರ್ 22 ರಂದು ಬಿಡುಗಡೆಯಾಗುತ್ತಿದೆ.