Select Your Language

Notifications

webdunia
webdunia
webdunia
webdunia

ನಮ್ಮ ಜಾಗದಲ್ಲಿ ನಾವ್ಯಾಕೆ ಹೆದರಬೇಕು? ಸಲಾರ್ ಗೆ ಟಾಂಗ್ ಕೊಟ್ಟ ದರ್ಶನ್

ನಮ್ಮ ಜಾಗದಲ್ಲಿ ನಾವ್ಯಾಕೆ ಹೆದರಬೇಕು? ಸಲಾರ್ ಗೆ ಟಾಂಗ್ ಕೊಟ್ಟ ದರ್ಶನ್
ಬೆಂಗಳೂರು , ಶುಕ್ರವಾರ, 15 ಡಿಸೆಂಬರ್ 2023 (11:11 IST)
Photo Courtesy: Twitter
ಬೆಂಗಳೂರು: ಕಾಟೇರ ಸಿನಿಮಾ ಸುದ್ದಿಗೋಷ್ಠಿಯಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ಯಾನ್ ಇಂಡಿಯಾ ಸಿನಿಮಾ ಸಲಾರ್ ಗೆ ಟಾಂಗ್ ಕೊಟ್ಟಿದ್ದಾರೆ.

ಕಾಟೇರ ಸಿನಿಮಾ ತಂಡ ನಿನ್ನೆ ಸುದ್ದಿಗೋಷ್ಠಿ ನಡೆಸಿತ್ತು. ಈ ಸುದ್ದಿಗೋಷ್ಠಿಯಲ್ಲಿ ದರ್ಶನ್ ಹಾಗೂ ಇಡೀ ಚಿತ್ರತಂಡವೇ ಹಾಜರಿತ್ತು. ಈ ವೇಳೆ ತಮ್ಮ ಸಿನಿಮಾಗೆ ಪರಭಾಷಾ ಸಿನಿಮಾಗಳಾದ ಸಲಾರ್, ಡಂಕಿ ಪೈಪೋಟಿ ಬಗ್ಗೆ ದರ್ಶನ್ ಪರೋಕ್ಷ ಟಾಂಗ್ ಕೊಟ್ಟರು.

‘ನಾವು 29 ಕ್ಕೆ ಬರೋಣ ಅಂದುಕೊಂಡಿದ್ವಿ. ನಮ್ಮ ಸಿನಿಮಾ, ನಮ್ಮ ಜಾಗ ಇದು, ಯಾರಿಗೋ ಹೆದರಿಕೊಂಡು ನಾವು ಯಾಕೆ ಹೋಗಬೇಕು? ನಮ್ಮ ಜಾಗಕ್ಕೆ ಬರಲು ಅವರು ಹೆದರಬೇಕು. ನಾವ್ಯಾಕೆ ಹೆದರಬೇಕು? ಯಾಕೆಂದರೆ ಕನ್ನಡ ಜನಗಳಿದಾರಾ ಇಲ್ವೋ ಅಂತ ನನಗೇ ಡೌಟು ಬಂತು. ಕನ್ನಡ ಸಿನಿಮಾ ಚೆನ್ನಾಗಿದ್ದಾಗ ಕನ್ನಡ ಜನಗಳು ಖಂಡಿತಾ ನಮ್ಮ ಕೈ ಹಿಡೀತಾರೆ. ಯಾಕೆಂದರೆ ನಾವು ಯಾವುದೇ ಪ್ಯಾನ್ ಇಂಡಿಯಾ ಸಿನಿಮಾ ಮಾಡಿಲ್ಲ. ಅಪ್ಪಟ ಕನ್ನಡ ಸಿನಿಮಾವಿದು. ಕರ್ನಾಟಕ ಜನರಿಗೋಸ್ಕರ ಮಾಡಿದ ಸಿನಿಮಾವಿದು’ ಎಂದು ದರ್ಶನ್ ಹೇಳಿದ್ದಾರೆ.

ಸಲಾರ್ ಸಿನಿಮಾ ಕನ್ನಡದ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಂಸ್ ನಿರ್ಮಾಣದ ಸಿನಿಮಾ. ಹಾಗಿದ್ದರೂ ಈ ಸಿನಿಮಾದ ನಾಯಕರಿಂದ ಹಿಡಿದು ಬಹುತೇಕ ಪಾತ್ರವರ್ಗದವರು ತೆಲುಗು ಮೂಲದವರು. ಹೀಗಾಗಿ ಇದು ತೆಲುಗು ಮೂಲದ ಪ್ಯಾನ್ ಇಂಡಿಯಾ ಸಿನಿಮಾ ಎಂದೇ ಪರಿಗಣಿತವಾಗಿದೆ. ಈ ಹಿನ್ನಲೆಯಲ್ಲಿ ದರ್ಶನ್ ಸಲಾರ್ ಗೆ ಪರೋಕ್ಷ ಟಾಂಗ್ ಕೊಟ್ಟಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಬಿಕೆ10: ಡ್ರೋಣ್ ಪ್ರತಾಪ್ ಮುದ್ದೆ ಮಾಡಿದ ತಪ್ಪಿಗೆ ಮನೆ ಮಂದಿಗೆ ಉಪವಾಸದ ಶಿಕ್ಷೆ