Publish Date: Wed, 13 Dec 2023 (14:54 IST)
Updated Date: Wed, 13 Dec 2023 (14:56 IST)
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಮಾ ಬಿಡುಗಡೆಯಾಗುತ್ತದೆ ಎಂದರೆ ಅಭಿಮಾನಿಗಳಲ್ಲಿರುವ ಕ್ರೇಜ್ ಲೆವೆಲ್ ಬೇರೆಯೇ ಆಗಿರುತ್ತದೆ.
ಇದೀಗ ಕಾಟೇರ ಸಿನಿಮಾ ಬಿಡುಗಡೆಗೂ ಮೊದಲೇ ಕಟೌಟ್ ಅಬ್ಬರ ಶುರುವಾಗಿದೆ. ದರ್ಶನ್ ನಾಯಕರಾಗಿ ನಟಿಸಿರುವ ತರುಣ್ ಸುಧೀರ್ ನಿರ್ದೇಶನದ ಕಾಟೇರ ಸಿನಿಮಾ ಡಿಸೆಂಬರ್ 29 ರಂದು ಥಿಯೇಟರ್ ನಲ್ಲಿ ಬಿಡುಗಡೆಯಾಗಲಿದೆ.
ಈ ಸಿನಿಮಾ ಬಿಡುಗಡೆ ಇನ್ನೂ ಎರಡು ವಾರಕ್ಕೂ ಹೆಚ್ಚು ಸಮಯವಿದೆ. ಆದರೆ ಆಗಲೇ ಥಿಯೇಟರ್ ಗಳ ಮುಂದೆ ದರ್ಶನ್ ಬೃಹತ್ ಕಟೌಟ್ ಗಳು ರಾರಾಜಿಸುತ್ತಿದ್ದು, ಕಾಟೇರ ಅಬ್ಬರ ಈಗಲೇ ಶುರುವಾಗಿದೆ.
ದರ್ಶನ್ ರನ್ನು ಬಾಕ್ಸ್ ಆಫೀಸ್ ಸುಲ್ತಾನ್ ಎಂದೇ ಕರೆಯತ್ತಾರೆ. ಅವರಿಗಿರುವ ಫ್ಯಾನ್ ಬೇಸ್ ಇದಕ್ಕೆ ಕಾರಣ. ಹೀಗಾಗಿ ಕಾಟೇರ ಸಿನಿಮಾವೂ ಬಿಗ್ ಬಜೆಟ್ ಸಿನಿಮಾ ರಿಲೀಸ್ ಗಳ ನಡುವೆ ರಿಲೀಸ್ ಆಗುತ್ತಿದ್ದರೂ ಕರ್ನಾಟಕ ಮಾರುಕಟ್ಟೆಯಲ್ಲಿ ಡಿ ಬಾಸ್ ಹವಾ ನಡೆಯಬಹುದು ಎಂಬ ಲೆಕ್ಕಾಚಾರವಿದೆ. ಈ ಸಿನಿಮಾದ ಎರಡು ಹಾಡುಗಳು ಈಗಾಗಲೇ ಬಿಡುಗಡೆಯಾಗಿ ಸದ್ದು ಮಾಡುತ್ತಿದೆ. ದರ್ಶನ್ ಗೆ ನಾಯಕಿಯಾಗಿ ಮಾಲಾಶ್ರೀ ಪುತ್ರಿ ಆರಾಧನಾ ನಟಿಸಿದ್ದಾರೆ.