Select Your Language

Notifications

webdunia
webdunia
webdunia
Saturday, 22 March 2025
webdunia

ಮಹಿಳೆಗೆ ನಾಯಿ ಕಚ್ಚಿದ ಪ್ರಕರಣ: ಡಿ ಬಾಸ್ ದರ್ಶನ್ ಹೆಸರು ಕೈಬಿಟ್ಟ ಪೊಲೀಸರು

ಮಹಿಳೆಗೆ ನಾಯಿ ಕಚ್ಚಿದ ಪ್ರಕರಣ: ಡಿ ಬಾಸ್ ದರ್ಶನ್ ಹೆಸರು ಕೈಬಿಟ್ಟ ಪೊಲೀಸರು
ಬೆಂಗಳೂರು , ಮಂಗಳವಾರ, 12 ಡಿಸೆಂಬರ್ 2023 (11:05 IST)
ಬೆಂಗಳೂರು: ಮಹಿಳೆಗೆ ನಾಯಿ ಕಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿದ ಪೊಲೀಸರು ದೋಷಾರೋಪ ಪಟ್ಟಿಯಿಂದ ನಟ ದರ್ಶನ್ ಹೆಸರು ಕೈ ಬಿಟ್ಟಿದ್ದಾರೆ.

ದರ್ಶನ್ ಮನೆ ಬಳಿ ಮಹಿಳೆಗೆ ಅವರ ನಾಯಿ ಕಚ್ಚಿತ್ತು. ಈ ಸಂಬಂಧ ದರ್ಶನ್ ಮನೆ ಸಿಬ್ಬಂದಿ ಮತ್ತು ಮಹಿಳೆ ನಡುವೆ ವಾಗ್ವಾದವಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಮಹಿಳೆ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.

ಎಫ್ಐಆರ್ ದಾಖಲಿಸಿದ ಪೊಲೀಸರು ನಟ ದರ್ಶನ್ ರನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದರು. ಮಹಿಳೆ ದೂರಿನಲ್ಲಿ ದರ್ಶನ್ ರನ್ನು ಎರಡನೇ ಆರೋಪಿಯಾಗಿ ಮಾಡಿ ದೂರು ನೀಡಿದ್ದರು.

ಆದರೆ ಇದೀಗ ಪ್ರಕರಣದಲ್ಲಿ ದರ್ಶನ್ ಕೈವಾಡವಿಲ್ಲ ಎಂಬುದು ತನಿಖೆಯಲ್ಲಿ ತಿಳಿದುಬಂದಿದ್ದರಿಂದ ಪೊಲೀಸರು ದೋಷಾರೋಪ ಪಟ್ಟಿಯಲ್ಲಿ ನಟನ ಹೆಸರು ಕೈ ಬಿಟ್ಟಿದ್ದಾರೆ. ಪ್ರಕರಣ ನಡೆಯುವ ಸಂದರ್ಭದಲ್ಲಿ ದರ್ಶನ್ ಮನೆಯಲ್ಲಿರಲಿಲ್ಲ. ಇದರಲ್ಲಿ ನನ್ನ ಕೈವಾಡವಿಲ್ಲ ಎಂದು ದರ್ಶನ್ ಕೂಡಾ ವಿಚಾರಣೆ ವೇಳೆ ಹೇಳಿದ್ದರು. ಇನ್ನು ಮುಂದೆ ಹೀಗಾಗದಂತೆ ನೋಡಿಕೊಳ್ಳುತ್ತೇನೆ ಎಂದೂ ಭರವಸೆಎ ನೀಡಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಬಿಬಿಕೆ10: ಶಾಲೆಯಾಗಿ ಬದಲಾದ ಬಿಗ್ ಬಾಸ್ ಮನೆ, ತನಿಷಾಗೆ ಐ ಲವ್ ಯೂ ಎಂದ ವರ್ತೂರು