ಮುಂಬೈ: ಮಹಾರಾಷ್ಟ್ರದ ಸಚಿವ ನಿತೇಶ್ ರಾಣೆ ಅವರು ತಮ್ಮ ಒಂದು ಹೇಳಿಕೆಯಿಂದ ಮತ್ತೆ ಸುದ್ದಿಯಲ್ಲಿದ್ದಾರೆ. ಈಚೆಗೆ ಚಾಕು ಇರಿತಕ್ಕೊಳಗಾದ ನಟ ಸೈಫ್ ಅಲಿ ಖಾನ್ ಅವರನ್ನು ಕಸ ಎನ್ನುವ ಮೂಲಕ ಮತ್ತೇ ನಾಲಿಗೆ ಹರಿಬಿಟ್ಟಿದ್ದಾರೆ.
ಬಾಂಗ್ಲಾದೇಶಿಗಳು ಮುಂಬೈನಲ್ಲಿ ಏನು ಮಾಡುತ್ತಿದ್ದಾರೆ ನೋಡಿ. ಅವರು ಸೈಫ್ ಅಲಿಖಾನ್ ಅವರ ಮನೆಗೆ ಪ್ರವೇಶಿಸಿದರು, ಅವರು ಮೊದಲು ರಸ್ತೆಗಳ ಕ್ರಾಸಿಂಗ್‌ಗಳಲ್ಲಿ ನಿಲ್ಲುತ್ತಿದ್ದರು, ಈಗ ಅವರು ಮನೆಗಳಿಗೆ ಪ್ರವೇಶಿಸಲು ಪ್ರಾರಂಭಿಸಿದ್ದಾರೆ, ಬಹುಶಃ ಅವರನ್ನು (ಸೈಫ್) ಕರೆದುಕೊಂಡು ಹೋಗಲು ಬಂದಿರಬಹುದು. ಅದು ಒಳ್ಳೆಯದು, ಸೈಫ್ ಅಲಿ ಖಾನ್ ಕಸ ಎನ್ನುವ ಮೂಲಕ ಮತ್ತೇ ಸುದ್ದಿಯಲ್ಲಿದ್ದಾರೆ.
ಲೀಲಾವತಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವಾಗ ಸೈಫ್ ನೋಡುವಾಗ ನಿಜವಾಗಿಯೂ ಈತ ಚಾಕು ಇರಿತಕ್ಕೊಳಗಾಗಿದ್ದಾನಾ ಎಂಬ ಪ್ರಶ್ನೆ ಹುಟ್ಟುತ್ತದೆ. ಆತ ನೃತ್ಯ ಮಾಡುತ್ತಿದ್ದಾನಾ ಅಥವಾ ಹಲ್ಲೆಗೆ ಒಳಗಾದವರ ಹಾಗೇ ನಟಿಸುತ್ತಾನಾ ಎಂಬ ಪ್ರಶ್ನೆ ಮೂಡುತ್ತಿದೆ ಎಂದರು.
.ಆಸ್ಪತ್ರೆಯಿಂದ ಹೊರಗೆ ಬಂದಾಗ ನೋಡಿದೆ, ಚೂರಿ ಇರಿತವೋ ಅಥವಾ ನಟಿಸುತ್ತಿದ್ದಾನೋ ಎಂಬ ಅನುಮಾನ ಬಂದಿತ್ತು. ವಾಕಿಂಗ್ ಮಾಡುವಾಗ ಡ್ಯಾನ್ಸ್ ಮಾಡ್ತಾ ಇದ್ದ ಹಾಗೇ ಕಾಣುತ್ತದೆ ಎಂದಿದ್ದಾನೆ.
ತಮ್ಮ ಭಾಷಣದಲ್ಲಿ ಅವರು ಮುಸ್ಲಿಂ ನಟರು ಅಸ್ವಸ್ಥರಾದಾಗ, ಪ್ರತಿಯೊಬ್ಬ ರಾಜಕಾರಣಿಯೂ ಸಹಾಯ ಮಾಡಲು ಮುಂದೆ ಬರುತ್ತಾರೆ ಆದರೆ ಹಿಂದೂ ನಟರಿಗೆ ಹೀಗೇ ಆಗಿದ್ದಲ್ಲಿ ಯಾರೂ ಮುಂದೆ ಬರುವುದಿಲ್ಲ ಎಂದರು.
ಲೀಲಾವತಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ನಂತರ ಸೈಫ್ ಅಲಿ ಖಾನ್ ಬಗ್ಗೆ ಪ್ರಶ್ನೆಗಳು ಹುಟ್ಟಿಕೊಂಡವು. ಅವರು ತುಂಬಾ ಆರೋಗ್ಯವಾಗಿದ್ದಾರೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಜನರು ಅಭಿಪ್ರಾಯಪಟ್ಟಿದ್ದಾರೆ