Select Your Language

Notifications

webdunia
webdunia
webdunia
webdunia

ಬಿಬಿಕೆ11: ಹನುಮಂತನನ್ನು ಬಳಸಿ ಬಿಸಾಡಬೇಡಿ, ಫ್ಯಾನ್ಸ್ ಆಗ್ರಹ

Hanumantha

Krishnaveni K

ಬೆಂಗಳೂರು , ಗುರುವಾರ, 23 ಜನವರಿ 2025 (11:19 IST)
Photo Credit: X
ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ ಫೈನಲ್ ತಲುಪಿರುವ ಹನುಮಂತನನ್ನು ಬಳಸಿ ಬಿಸಾಡಬೇಡಿ ಎಂದು ವೀಕ್ಷಕರು ಸೋಷಿಯಲ್ ಮೀಡಿಯಾ ಮೂಲಕ ಕಲರ್ಸ್ ವಾಹಿನಿಗೆ ಮನವಿ ಮಾಡುತ್ತಿದ್ದಾರೆ.

ಬಿಗ್ ಬಾಸ್ ನಲ್ಲಿ ಲಾಯರ್ ಜಗದೀಶ್ ಹೊರ ಹೋದ ಮೇಲೆ ಬಂದವರು ಹನುಮಂತ. ಹಳ್ಳಿ ಹುಡುಗ, ಮುಗ್ಧ ಮಾತುಗಳ ಮೂಲಕ ಬಿಗ್ ಬಾಸ್ ನಲ್ಲಿ ಇದುವರೆಗೆ ಭರ್ಜರಿ ಮನರಂಜನೆ ಒದಗಿಸಿದ್ದಾರೆ. ಜೊತೆಗೆ ಟಾಸ್ಕ್ ಗಳಲ್ಲೂ ಹನುಮಂತ ಸೈ ಎನಿಸಿಕೊಂಡಿದ್ದಾರೆ.

ಇದುವರೆಗೆ ನಾಮಿನೇಟ್ ಆದರೂ ವೀಕ್ಷಕರು ಅವರಿಗೆ ಹೆಚ್ಚು ವೋಟ್ ಮಾಡಿ ಈಗ ಫೈನಲ್ ತನಕ ತಂದು ನಿಲ್ಲಿಸಿದ್ದಾರೆ. ಹನುಮಂತನಿಂದಾಗಿ ಬಿಗ್ ಬಾಸ್ ಗೆ ಸಾಕಷ್ಟು ಟಿಆರ್ ಪಿ ಬಂದಿದೆ. ಆದರೆ ಈಗ ಫೈನಲ್ ಹಂತದಲ್ಲಿ ತ್ರಿವಿಕ್ರಮ್ ಮತ್ತು ರಜತ್ ರನ್ನೇ ಹೆಚ್ಚು ಪ್ರಮೋಟ್ ಮಾಡುತ್ತಿರುವುದು ಅಭಿಮಾನಿಗಳ ಅಸಮಾಧಾನಕ್ಕೆ ಗುರಿಯಾಗಿದೆ.

ಹನುಮಂತನನ್ನು ಕೇವಲ ಟಿಆರ್ ಪಿಗಾಗಿ ಬಳಸಿ ಈಗ ವಿನ್ನರ್ ಎಂದು ಇನ್ನೊಬ್ಬರನ್ನು ಘೋಷಿಸಬೇಡಿ. ಹನುಮಂತ ಕೇವಲ ಮನರಂಜನೆ ಮಾತ್ರವಲ್ಲ, ಟಾಸ್ಕ್ ಗಳಲ್ಲೂ ಉತ್ತಮ ಪ್ರದರ್ಶನ ನೀಡಿದ್ದಾರೆ. ಅವರನ್ನು ಅರ್ಹವಾಗಿ ಗೆಲ್ಲಿಸಿ ಎಂದು ಸೋಷಿಯಲ್ ಮೀಡಿಯಾಗಳಲ್ಲಿ ಮನವಿ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಷ್ಣೋಯಿ ಗ್ಯಾಂಗ್ ಅಲ್ಲ: ಬಾಲಿವುಡ್‌ನ ನಟ ಕಪಿಲ್ ಶರ್ಮಾ, ರಾಜ್‌ಪಾಲ್ ಯಾದವ್‌ಗೆ ಜೀವಬೆದರಿಕೆ