Publish Date: Fri, 24 Jul 2020 (13:27 IST)
Updated Date: Fri, 24 Jul 2020 (13:28 IST)
ಬೆಂಗಳೂರು: ಒಬ್ಬ ಸ್ಟಾರ್ ಇನ್ನೊಬ್ಬ ಸ್ಟಾರ್ ಸಿನಿಮಾವನ್ನು ಕೊಂಡಾಡುವುದು ವಿರಳ. ಈಗ ರಾಕಿಂಗ್ ಸ್ಟಾರ್ ಯಶ್ ಆ ಕೆಲಸವನ್ನು ಮಾಡಿದ್ದಾರೆ.
ನಿರ್ದೇಶಕ ಸಂತೋಷ್ ಆನಂದ್ ರಾಮ್ ಗೆ ಮಿಸ್ಟರ್ ಆಂಡ್ ಮಿಸೆಸ್ ರಾಮಚಾರಿ ಸಿನಿಮಾ ಕೊಟ್ಟಿದ್ದಕ್ಕೆ ಧನ್ಯವಾದ ತಿಳಿಸಲು ಟ್ವೀಟ್ ಮಾಡಿದ್ದ ಯಶ್ ಹಳೆಯ ನೆನಪುಗಳನ್ನು ಹಂಚಿಕೊಂಡಿದ್ದಲ್ಲದೆ, ಸಂತೋಷ್ ಆನಂದ್ ರಾಮ್ ಅವರ ಪುನೀತ್ ರಾಜಕುಮಾರ್ ಅಭಿನಯದ ‘ಯುವರತ್ನ’ ಸಿನಿಮಾಗೂ ಆಲ್ ದಿ ಬೆಸ್ಟ್ ಹೇಳಿದ್ದಾರೆ. ಯಶ್ ಮಾಡಿದ ಈ ಟ್ವೀಟ್ ಅಪ್ಪು ಅಭಿಮಾನಿಗಳಿಗೂ ಖುಷಿ ತಂದಿದೆ.