Publish Date: Fri, 24 Jul 2020 (11:19 IST)
Updated Date: Fri, 24 Jul 2020 (11:21 IST)
ಬೆಂಗಳೂರು: ಪುನೀತ್ ರಾಜಕುಮಾರ್ ಬ್ಯಾನರ್ ನಲ್ಲಿ ನಿರ್ಮಾಣವಾದ ಫ್ರೆಂಚ್ ಬಿರಿಯಾನಿ ಸಿನಿಮಾ ಇಂದು ರಿಲೀಸ್ ಆಗಿದ್ದು, ಎಲ್ಲೆಡೆ ಇದರದ್ದೇ ಚರ್ಚೆಯಾಗುತ್ತಿದೆ.
ಡ್ಯಾನಿಶ್ ಸೇಠ್ ಕಾಮಿಡಿ ಈಗಾಗಲೇ ಎಲ್ಲರಿಗೂ ಇಷ್ಟವಾಗಿದೆ. ಈ ಸಿನಿಮಾದಲ್ಲಿ ಅವರ ನೈಜ ಅಭಿನಯವೂ ಎಲ್ಲರಿಗೂ ಇಷ್ಟವಾಗುತ್ತದೆ. ಚಿತ್ರವಿಡೀ ನಕ್ಕು ನಕ್ಕು ಸುಸ್ತಾಗುವಷ್ಟು ಕಾಮಿಡಿ ದೃಶ್ಯಗಳಿವೆ. ಒಂದು ರೀತಿಯಲ್ಲಿ ಸಂಪೂರ್ಣ ಎಂಟರ್ ಟೈನರ್.
ಚಿತ್ರದಲ್ಲಿ ಶಿವಾಜಿನಗರದ ಲೋಕಲ್ ಭಾಷೆಯನ್ನು ಚೆನ್ನಾಗಿಯೇ ಬಳಸಲಾಗಿದೆ. ಜತೆಗೆ ಟಿವಿ ಕ್ಯಾಮರಾ ಮುಂದೆ ನಿಂತು ಮುಖ ತೋರಿಸುವ ಸಾಮಾನ್ಯರ ಹಪಹಪಿತನ ಎಲ್ಲವೂ ಸಹಜವಾಗಿದೆ. ಒಮ್ಮೆ ನೋಡಲು ಅಡ್ಡಿಯಿಲ್ಲ. ಚಿತ್ರ ವೀಕ್ಷಿಸಿದ ಪ್ರೇಕ್ಷಕರೂ ಸಾಮಾಜಿಕ ಜಾಲತಾಣದ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.